ಪ್ರವಾಹ ಪೀಡಿತ ಪಾಕಿಸ್ತಾನದಲ್ಲಿ ೮ ವರ್ಷದ ಹಿಂದೂ ಬಾಲಕಿಗೆ ಪಡಿತರ ನೀಡುವ ಆಸೆ ತೋರಿಸಿ ಆಕೆಯ ಮೇಲೆ ಇಬ್ಬರು ಮತಾಂಧರಿಂದ ಸಾಮೂಹಿಕ ಅತ್ಯಾಚಾರ

ಕರಾಚಿ (ಪಾಕಿಸ್ತಾನ) – ಪ್ರಸ್ತುತ ಪಾಕಿಸ್ತಾನದಲ್ಲಿ ಪ್ರವಾಹದ ಪರಿಸ್ಥಿತಿ ಇದೆ. ಈ ಅವಧಿಯಲ್ಲಿ, ಆಹಾರದ ಲಭ್ಯತೆ ವಿರಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಂಧ್ ಪ್ರಾಂತ್ಯದ ಶಹದಾದ್‌ಪುರದಲ್ಲಿ ೮ ವರ್ಷದ ಹಿಂದೂ ಬಾಲಕಿಗೆ ಪಡಿತರ ನೀಡುವ ಆಸೆ ತೋರಿಸಿ ಆಕೆಯ ಮೇಲೆ ಖಾಲಿದ್ ಮತ್ತು ದಿಲ್‌ಶಾದ್ ಎಂಬ ಇಬ್ಬರು ಮತಾಂಧ ಯುವಕರು ೨ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಆಗಸ್ಟ್ ೨೮ ರಂದು ನಡೆದಿದೆ.

ಈ ಹಿನ್ನೆಲೆಯಲ್ಲಿನ ವಿಡಿಯೊ ಒಂದು ‘ವಾಯ್ಸ್ ಆಫ್ ಪಾಕಿಸ್ತಾನಿ ಮೈನಾರಿಟಿ’ ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ೮ ವರ್ಷದ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕಣ್ಣುಗಳನ್ನು ಕಿತ್ತು ಹಾಕಿದ ಘಟನೆ ನಡೆದಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನ ಇಸ್ಲಾಮಿಕ್ ದೇಶವಾಗಿದೆ; ಆದರೆ ಇಂತಹ ಕಾಮಾಂಧರಿಗೆ ಷರಿಯಾ ಕಾನೂನಿನ ಪ್ರಕಾರ ಕೈಕಾಲು ಕತ್ತರಿಸುವ ಅಥವಾ ಸೊಂಟದ ತನಕ ಗುಂಡಿಯಲ್ಲಿ ಹೂಳಿ ಕಲ್ಲೆಸೆಯುವ ಶಿಕ್ಷೆ ವಿಧಿಸಲಾಗುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !