ಗೌಹಾಟಿ – ಆಸ್ಸಾಂನ ಗೋಲಪಾಡಾ ಜಿಲ್ಲೆಯ ಅಜಮಲ ಹುಸೇನ ಹೆಸರಿನ ಅಲ್ ಕಾಯ್ದಾ ಸಂಘಟನೆಯ ಮತ್ತೊಬ್ಬ ಭಯೋತ್ಪಾದಕನನ್ನು ಇತ್ತೀಚೆ ಬಂಧಿಸಲಾಯಿತು. ಆತ ಗೌಹಾಟಿಯ ತನ್ನ ಮನೆಯಲ್ಲಿ ಅಲ್ ಕಾಯ್ದಾ ಸಂಘಟನೆಯ ಸದಸ್ಯನಾಗಿದ್ದ ಬಾಂಗ್ಲಾದೇಶಿ ಭಯೋತ್ಪಾದಕನಿಗೆ ಆಶ್ರಯ ನೀಡಿದ್ದನು. ಆಸ್ಸಾಂನಲ್ಲಿ ಇಲ್ಲಿಯವರೆಗೆ ‘ಅಲ್ ಕಾಯ್ದಾ ಭಾರತೀಯ ಉಪಖಂಡ’ ಮತ್ತು ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ೩೮ ಭಯೋತ್ಪಾದಕರನ್ನು ಬಂಧಿಸಲಾಗಿದೆ.
೧. ಪ್ರಸಾರಮಾಧ್ಯಮಗಳು ನೀಡಿದ ಒಂದು ವಾರ್ತೆಯನುಸಾರ ಅಜಮಲ ಹುಸೇನ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿ ಅಲ್ ಕಾಯ್ದಾದಿಂದ ತರಬೇತಿ ಪಡೆದಿರುವುದನ್ನು ಒಪ್ಪಿಕೊಂಡಿದ್ದಾನೆ.
೨. ಸದ್ಯಕ್ಕೆ ಆಸ್ಸಾಂ ಪೊಲೀಸರು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ರಾಜ್ಯದ ಅನೇಕ ಮದರಸಾ ಮತ್ತು ಮಸೀದಿಗಳನ್ನು ನಷ್ಟಗೊಳಿಸುವ ಚಳುವಳಿಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಳುವಳಿಯಡಿಯಲ್ಲಿ ಪೊಲೀಸರು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿರುವ ಒಂದು ಮದರಸಾವನ್ನು ನಷ್ಟಗೊಳಿಸಿದರು. ( ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ – ಸಂಪಾದಕರು)