ಯತಿ ನರಸಿಂಹಾನಂದ ಮತ್ತು ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಬಂಧನದ ಬೇಡಿಕೆಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

ತ್ಯಾಗಿ ಇವರ ‘ಮಹಮ್ಮದ್’ ಪುಸ್ತಕದ ಮೇಲಿನ ನಿಷೇಧದ ಬೇಡಿಕೆ ತಿರಸ್ಕೃತ !

ನವ ದೆಹಲಿ – ಉತ್ತರ ಪ್ರದೇಶದಲ್ಲಿನ ಗಾಜಿಯಬಾದ್ ಇಲ್ಲಿಯ ಡಾಸನಾ ದೇವಸ್ಥಾನದ ಮಹಾಂತ ಯತಿ ನರಸಿಂಹಾನಂದ ಹಾಗೂ ಶಿಯಾ ಸೆಂಟ್ರಲ್ ವಕ್ಫ ಬೋರ್ಡಿನ ಮಾಜಿ ಅಧ್ಯಕ್ಷ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ ರಿಝವಿ) ಇವರನ್ನು ಬಂದಿಸಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ‘ಭಾರತೀಯ ಮುಸಲ್ಮಾನ ಶಿಯಾ ಇಸ್ನಾ ಆಶಾರಿ ಜಮಾತ್ ’ನಿಂದ ಈ ಅರ್ಜಿ ದಾಖಲಿಸಲಾಗಿತ್ತು.

ಇದರಲ್ಲಿ ತ್ಯಾಗಿ ಇವರು ಬರೆದಿರುವ ‘ಮಹಮ್ಮದ್’ ಈ ಪುಸ್ತಕ ನಿಷೇಧಿಸಬೇಕೆಂದು ಒತ್ತಾಯಿಸಲಾಗಿತ್ತು; ಆದರೆ ಮುಖ್ಯ ನ್ಯಾಯಾಧೀಶ ಉದಯ ಲಳಿತ ಮತ್ತು ನ್ಯಾಯಮೂರ್ತಿ ಎಸ್.ಆರ್. ಭಟ್ ಇವರ ನ್ಯಾಯಪೀಠವು ಸಂವಿಧಾನದ ಕಲಂ ೩೨ ಪ್ರಕಾರ ಈ ಮನವಿ ತಿರಸ್ಕರಿಸಲಾಗಿದೆ. ಈ ಮೊದಲು ಸರ್ವೋಚ್ಚ ನ್ಯಾಯಾಲಯವು ತ್ಯಾಗಿ ಇವರ ಕುರಾನಿನಲ್ಲಿನ ೨೬ ಆಯತ (ವಾಕ್ಯಗಳನ್ನು) ತೆಗೆದು ಹಾಕಲು ಮಾಡಿರುವ ಅರ್ಜಿಯನ್ನು ತಿರಸ್ಕರಿಸಿ ೫೦ ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.