ದೇಶ ವಿರೋಧಿ ಚಟುವಟಿಕೆ ನಡೆಸುವ ಮದರಸಾಗಳು ನೆಲಸಮ ಮಾಡಲಾಗುವುದು !

ಅಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮ್ಮತ ಬೀಸ್ವಾ ಸರ್ಮಾ ಇವರ ಹೇಳಿಕೆ

ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬಿಸ್ವ ಸರ್ಮಾ

ಗೌಹಾಟಿ (ಅಸ್ಸಾಂ) – ಒಂದು ವೇಳೆ ದೇಶ ವಿರೋಧಿ ಚಟುವಟಿಕೆಗಳಿಗೆ ಮದರಸಾಗಳ ಉಪಯೋಗವಾಗುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದರೆ ನಾವು ಅಂತಹ ಮದರಸಾಗಳನ್ನು ನೆಲಸಮ ಮಾಡುವೆವು, ಎಂದು ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬಿಸ್ವ ಸರ್ಮಾ ಇವರು ಸ್ಪಷ್ಟವಾಗಿ ಮಾಹಿತಿ ನೀಡಿದರು. ಕಳೆದ ಕೆಲವು ದಿನಗಳಿಂದ ಭಯೋತ್ಪಾದಕರ ಜೊತೆ ಸಂಬಂಧವಿರುವ ಅಸ್ಸಾಂನ ೩ ಮದರಸಾಗಳು ನೆಲಸಮ ಮಾಡಲಾಯಿತು. ಈ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸರ್ಮಾರವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಮದರಸಾಗಳು ನೆಲೆಸಮ ಮಾಡುವುದರ ಬಗ್ಗೆ ನಮ್ಮದು ಯಾವುದೇ ಉದ್ದೇಶವಿಲ್ಲ. ಮದರಸಾದ ಉಪಯೋಗ ಜಿಹಾದಿಗಳಿಗಾಗಿ ಮಾಡಲಾಗುತ್ತಿಲ್ಲವಲ್ಲಾ ? ಕೇವಲ ಇದನ್ನು ಸ್ಪಷ್ಟಪಡಿಸಬೇಕು. ಈ ಮೊದಲು ಕೂಡ ಮುಖ್ಯಮಂತ್ರಿ ಸರ್ಮಾ ಇವರು ಮದರಸಾಗಳ ಬಗ್ಗೆ ಹೇಳಿಕೆ ನೀಡಿದ್ದರು. ಅವರು, ಮದರಸಾಗಳ ಉಪಯೋಗ ಶಿಕ್ಷಣದ ಬದಲು ಭಯೋತ್ಪಾದಕ ಪ್ರಶಿಕ್ಷಣದ ಕೇಂದ್ರವೆಂದು ಉಪಯೋಗಿಸಲಾಗುತ್ತಿದೆ ಎಂದು ಅವರು ಹೇಳಿದ್ದರು.

ಸಂಪಾದಕೀಯ ನಿಲುವು

ದೇಶದ ಪ್ರತಿಯೊಬ್ಬ ಮುಖ್ಯಮಂತ್ರಿಯಿಂದ ರಾಷ್ಟ್ರಪ್ರೇಮಿಗಳಿಗೆ ಇದೇ ರೀತಿಯ ಅಪೇಕ್ಷೆ ಇದೆ ! ನಿಜವೆಂದರೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಇರುವಾಗ ಮದರಸ ಎಂಬ ಪ್ರಕಾರ ನಿಲ್ಲಿಸುವುದು ಅವಶ್ಯಕವಾಗಿದೆ !