ದಾವೂದ ಇಬ್ರಾಹಿಂನ ಮಾಹಿತಿ ನೀಡುವವರಿಗೆ ಎನ್.ಐ.ಎ. ೨೫ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದೆ

ನವ ದೆಹಲಿ – ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಅಂತರರಾಷ್ಟ್ರೀಯ ಭಯೋತ್ಪಾದಕ ದಾವೂದ ಇಬ್ರಾಹಿಮ್ ಮತ್ತು ಅವನ ಸಹಚರರನ್ನು ಬಂಧಿಸಲು ಹಣ ನೀಡಲಾಗುವುದೆಂದು ಘೋಷಿಸಿದೆ. ದಾವೂದನಿಗೆ ಬಂಧಿಸುವ ವ್ಯಕ್ತಿಗೆ ಎನ್.ಐ.ಎ. ವತಿಯಿಂದ ೨೫ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಮುಂಬಯಿಯಲ್ಲಿ ೧೯೯೩ ರಲ್ಲಿ ಜರುಗಿದ ಸರಣಿ ಬಾಂಬಸ್ಫೋಟ ಅಲ್ಲದೇ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ, ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ನಕಲಿ ನೋಟುಗಳ ಪ್ರಕರಣ, ಭಯೋತ್ಪಾದಕರ ದಾಳಿ ಇಂತಹ ಅನೇಕ ಅಪರಾಧಗಳಲ್ಲಿ ದಾವೂದ ಆರೋಪಿಯಾಗಿದ್ದಾನೆ.

ದಾವೂದನ ಸಹೋದರ ಅನೀಸ ಇಬ್ರಾಹಿಂ, ದಾವೂದನ ನಿಕಟವರ್ತಿ ಜಾವೇದ ಪಟೇಲ ಉರ್ಫ ಜಾವೇದ ಚಿಕನಾ, ಶಕೀಲ ಶೇಖ ಉರ್ಫ ಛೋಟಾ ಶಕೀಲನೊಂದಿಗೆ ಇಬ್ರಾಹಿಮ್ ಮುಶ್ತಾಕ ಅಬ್ದುಲ ರಝಾಕ ಮೆಮನ ಉರ್ಫ ಟಾಯಗರ ಮೆಮನ ಇವನನ್ನು ಬಂಧಿಸುವವರಿಗೂ ಬಹುಮಾನಗಳನ್ನು ಘೋಷಿಸಲಾಗಿದೆ. ಛೋಟಾ ಶಕೀಲನನ್ನು ಬಂಧಿಸುವವರಿಗೆ ೨೦ ಲಕ್ಷ ರೂಪಾಯಿ ಹಾಗೆಯೇ ಅನೀಸ, ಚಿಕನಾ ಮತ್ತು ಮೆನನರನ್ನು ಬಂಧಿಸುವವರಿಗೆ ಪ್ರತಿಯೊಬ್ಬ ವ್ಯಕ್ತಿಗೆ ೧೫ ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದೆ.

ಸಂಪಾದಕೀಯ ನಿಲುವು

ದಾವೂದ ಇಬ್ರಾಹಿಮ್ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನುವ ಬಗ್ಗೆ ಅಸಂಖ್ಯಾತ ದಾಖಲೆಗಳು ಮತ್ತು ಮಾಹಿತಿ ಭಾರತೀಯ ರಕ್ಷಣಾ ಸಚಿವಾಲಯದ ಬಳಿಯಿದೆ. ಹೀಗಿರುವಾಗಲೂ ಪಾಕಿಸ್ತಾನದಲ್ಲಿ ನುಸುಳಿ ಅವನನ್ನು ಎಳೆದುಕೊಂಡು ಭಾರತಕ್ಕೆ ಕರೆ ತರುವ ಬದಲು ಈ ರೀತಿ ಬಹುಮಾನವನ್ನು ಘೋಷಿಸುವ ಸಮಯ ಭಾರತೀಯ ರಕ್ಷಣಾ ಸಚಿವಾಲಯಕ್ಕೆ ಬಂದಿರುವುದು ನಾಚಿಕೆಗೇಡಾಗಿದೆ !