ಉತ್ತರಪ್ರದೇಶ ಭಾಜಪ ಸರಕಾರ ರಾಜ್ಯದಲ್ಲಿನ ಅನುಮತಿ ಇಲ್ಲದಿರುವ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಸಲಿದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಅನುಮತಿ ಇಲ್ಲದೆ ಇರುವ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಸುವ ನಿರ್ಣಯ ತೆಗೆದುಕೊಂಡಿದೆ. ಈ ಸಮೀಕ್ಷೆಯ ಮೂಲಕ ಮೂಲಭೂತ ಸೌಲಭ್ಯದ ಸ್ಥಿತಿಯನ್ನು ಪರಿಶೀಲಿಸಲಾಗುವುದು. ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣ ಆಯೋಗದ ಆದೇಶದ ಪ್ರಕಾರ ಸರಕಾರವು ಈ ನಿರ್ಣಯ ತೆಗೆದುಕೊಂಡಿರುವುದು ಎಂದು ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ರಾಜ್ಯ ಸಚಿವ ದಾನಿಷ ಆಝಾದ್ ಅನ್ಸಾರಿ ಇವರು ಹೇಳಿದರು. ಉತ್ತರ ಪ್ರದೇಶದಲ್ಲಿ ಪ್ರಸ್ತುತ ೧೬ ಸಾವಿರ ೪೬೧ ಮದರಸಾಗಳು ಇವೆ. ಇದರಲ್ಲಿನ ಕೇವಲ ೫೬೦ ಮದರಸಾಗಳಿಗೆ ಸರಕಾರಿ ಅನುದಾನ ನೀಡಲಾಗುತ್ತಿದೆ.
‘ಈ ಸಮೀಕ್ಷೆಯ ನಂತರ ಅವರಿಗೆ ಮಾನ್ಯತೆ ನೀಡಲಾಗುವುದೆ ?’, ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅನ್ಸಾರಿ ಅವರು, ಪ್ರಸ್ತುತ ನಮ್ಮ ಉದ್ದೇಶ ಮೂಲಭೂತ ಸೌಲಭ್ಯದ ಮಾಹಿತಿ ಕಲೆ ಹಾಕುವುದಾಗಿದೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಏನೆಲ್ಲಾ ಕೇಳಲಾಗುವುದು ?

ಅನ್ಸಾರಿ ಅವರು, ಸಮೀಕ್ಷೆಯಲ್ಲಿ ಮದರಸಾದ ಹೆಸರು, ಅದನ್ನು ನಡೆಸುವ ಸಂಸ್ಥೆಯ ಹೆಸರು, ಮದರಸ ಖಾಸಗಿ ಅಥವಾ ಬಾಡಿಗೆಯ ಸ್ಥಳದಲ್ಲಿ ನಡೆಸಲಾಗುತ್ತಿದೆ ಇದರ ಮಾಹಿತಿ; ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ಮದರಸಾದ ಪಠ್ಯ ಕ್ರಮ, ಮದರಸಾದ ಉತ್ಪನ್ನದ ಮೂಲ, ನೀರಿನ ಸೌಲಭ್ಯ, ವಿದ್ಯುತ್, ಶೌಚಾಲಯ ಮುಂತಾದರ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮದರಸಾದಿಂದ ಜಿಹಾದಿ ಭಯೋತ್ಪಾದಕ ಚಟುವಟಿಕೆ, ಲವ್ ಜಿಹಾದ್, ಕಟ್ಟರವಾದದ ಪ್ರಸಾರ, ಲೈಂಗಿಕ ಶೋಷಣೆ ಮುಂತಾದ ಅಪರಾಧಿ ಕೃತ್ಯಗಳು ನಡೆಯುತ್ತಿರುವುದು ನೋಡಿದರೆ ಸಂಪೂರ್ಣ ದೇಶದಲ್ಲಿನ ಮದರಸಾಗಳ ಈ ರೀತಿ ಸಮೀಕ್ಷೆ ನಡೆಸಿ ಅವರ ಮೇಲೆ ಅಂಕುಶ ಇಡುವುದು ಅಥವಾ ಅದಕ್ಕೆ ಬೀಗ ಜಡಿಯುವುದು ಅವಶ್ಯಕ !