ನೋಯ್ಡಾದಲ್ಲಿ (ಉತ್ತರಪ್ರದೇಶ) ೨ ಅಕ್ರಮ ಬಹುಮಹಡಿ ಕಟ್ಟಡಗಳನ್ನು ೯ ಸೆಕೆಂಡುಗಳಲ್ಲಿ ನೆಲಸಮ !

ನೊಯ್ಡಾ (ಉತ್ತರಪ್ರದೇಶ) – ಇಲ್ಲಿಯ ಸೆಕ್ಟರ್ ೯೩ ರಲ್ಲಿ ‘ಸೂಪರ್‌ಟೇಕ್’ ಕಂಪನಿಯು ಕಟ್ಟಿದ್ದ ೪೦ ಅಂತಸ್ತಿನ ೨ ಅಕ್ರಮ ಬಹುಮಡಿ ಕಟ್ಟಡಗಳನ್ನು ಮಧ್ಯಾಹ್ನ ೨.೩೦ ಕ್ಕೆ ನೆಲಸಮ ಮಾಡಲಾಯಿತು. ೧೦೦ ಮೀಟರ್‌ಗಿಂತಲೂ ಹೆಚ್ಚು ಎತ್ತರದ ಈ ಎರಡು ಕಟ್ಟಡ ನೆಲಸಮ ಮಾಡಲು ಕೇವಲ ೯ ಸೆಕೆಂಡು ತಗಲಿತು. ಕಟ್ಟಡ ನೆಲಸಮ ಮಾಡಲು ೩ ಸಾವಿರದ ೭೦೦ ಕಿಲೋ ಸ್ಪೋಟಕಗಳನ್ನು ಉಪಯೋಗಿಸಲಾಯಿತು. ಹಾಗೂ ಕಟ್ಟಡ ನೆಲೆಸಮ ಮಾಡುವ ಮೊದಲು ಆ ಪರಿಸರದಲ್ಲಿ ವಾಸಿಸುವ ಸುಮಾರು ೭ ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಲಾಗಿತ್ತು. ಆದ್ದರಿಂದ ಈ ಕಟ್ಟಡ ನೆಲೆಸಮದ ಪ್ರಕ್ರಿಯೆ ನಂತರ ಯಾವುದೇ ರೀತಿಯ ಹಾನಿ ಆಗಲಿಲ್ಲ. ಈ ಸಮಯದಲ್ಲಿ ನೊಯ್ಡಾದ ಪೋಲಿಸರ ೪೦೦ ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ತುರ್ತು ಪರಿಸ್ಥಿತಿಗಾಗಿ ಆಂಬುಲೆನ್ಸ್‌ಗಳನ್ನು ನೇಮಿಸಲಾಗಿತ್ತು. ಮಾಲಿನ್ಯದ ಮಟ್ಟದ ಮೇಲೆ ನಿಗಾವಹಿಸಲು ವಿಶೇಷ ಯಂತ್ರಗಳ ವ್ಯವಸ್ಥೆ ಮಾಡಲಾಗಿತ್ತು. ಕಟ್ಟಡ ನೆಲಸಮ ಮಾಡುವ ಪ್ರಕ್ರಿಯೆಗಾಗಿ ಸುಮಾರು ೧೭ ಕೋಟಿ ೫೫ ಲಕ್ಷ ರೂಪಾಯ ಖರ್ಚು ಮಾಡಲಾಯಿತು. ಈ ಖರ್ಚು ‘ಸೂಪರ್‌ಟೆಕ್’ ಕಂಪನಿಯಿಂದ ವಸೂಲಿ ಮಾಡಲಾಗುವುದು. ನೆಲಸಮ ಮಾಡಿರುವ ಕಟ್ಟಡದ ವಸ್ತುಗಳು ಮಾರಾಟ ಮಾಡಿ ಸುಮಾರು ೪ ಕೋಟಿ ರೂಪಾಯಿ ಸಿಗಲಿದೆ.

೧. ೨೦೦೪ ರಲ್ಲಿ ನೊಯ್ಡಾ ಪ್ರಾಧಿಕಾರವು ‘ಸೂಪರ್‌ಟೇಕ್’ಗೆ ಹೌಸಿಂಗ್ ಸೊಸೈಟಿ ಕಟ್ಟಲು ಒಂದು ಭೂಭಾಗ ನೀಡಿತ್ತು. ಕಟ್ಟಡದ ನಕ್ಷೆ ೨೦೦೫ ರಲ್ಲಿ ಮಂಜೂರ ಮಾಡಲಾಗಿತ್ತು. ಇದರಲ್ಲಿ ೧೦ ಅಂತಸ್ತಿನ ೧೪ ಕಟ್ಟಡಗಳು ಕಟ್ಟಲು ಅನುಮತಿ ನೀಡಲಾಗಿತ್ತು. ೨೦೦೬ ರಲ್ಲಿ ಇದರಲ್ಲಿ ಬದಲಾವಣೆ ಮಾಡಿ ೧೧ ಅಂತಸ್ತಿನ ೧೫ ಕಟ್ಟಡ ಕಟ್ಟಲು ಯೋಜನೆ ಮಾಡಲಾಯಿತು; ಆದರೆ ಅದರಲ್ಲಿ ಮತ್ತೆ ನವೆಂಬರ್ ೨೦೦೯ ರಲ್ಲಿ ಬದಲಾವಣೆ ಮಾಡಿ ೨೪ ಅಂತಸ್ತಿನ ೨ ಕಟ್ಟಡ ಕಟ್ಟಲಾಯಿತು. ಮಾರ್ಚ್ ೨೦೧೨ ರಲ್ಲಿ ಅದರಲ್ಲಿ ೨೪ ಅಂತಸ್ತು ಹೆಚ್ಚಿಸಿ ೪೦ ಅಂತಸ್ತು ಮಾಡಲಾಯಿತು. ಈ ಸಮಯದಲ್ಲಿ ಕಟ್ಟಡದಲ್ಲಿ ೬೩೩ ಮನೆಗಳ ನೋಂದಣಿಯೂ ಆಗಿದ್ದವು.

೨. ಈ ಕಟ್ಟಡದ ವಿರೋಧದಲ್ಲಿ ನೆರೆಯ ಎಮ್ರಾಲ್ಡ ಗೋಲ್ಡ್ ಸೊಸೈಟಿ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಉದಯ ಭಾನಸಿಂಹ ತೇತಿಯಾ ಇವರು ೨೦೧೨ ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದರು. ಈ ಬಗ್ಗೆ ೨೦೧೪ ರಲ್ಲಿ ಉಚ್ಚ ನ್ಯಾಯಾಲಯವು ಕಟ್ಟಡ ಅಕ್ರಮ ಎಂದು ನಿರ್ಧರಿಸಿ ನೆಲಸಮ ಮಾಡುವ ಆದೇಶ ನೀಡಿತು. ಹಾಗೂ ಯಾರು ಮನೆಗಳು ಕಾಯ್ದಿರಿಸಿದ್ದರೋ, ಅವರಿಗೆ ಅವರ ಹಣವನ್ನು ಶೇ. ೧೪ ರಷ್ಟು ಬಡ್ಡಿ ಸಹಿತ ಹಿಂತಿರುಗಿಸಲು ಆದೇಶ ಸಹ ನ್ಯಾಯಾಲಯ ನೀಡಿತ್ತು.

೩. ಈ ತೀರ್ಪನ್ನು ಸೂಪರ್‌ಟೇಕ್ ಕಂಪನಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಸಮ್ಮತಿಸಿ ಆಗಸ್ಟ್ ೩೧, ೨೦೨೧ ರಂದು ಆದೇಶ ನೀಡಿ ಮುಂದಿನ ಮೂರು ತಿಂಗಳಲ್ಲಿ ಎಂದರೆ ನವೆಂಬರ್ ೨೦೨೧ ರಲ್ಲಿ ನೆಲಸಮ ಮಾಡಬೇಕೆಂದು ಹೇಳಿತು. ನೊಯ್ಡಾ ಪ್ರಾಧಿಕಾರವು ನ್ಯಾಯಾಲಯದಲ್ಲಿ, ಈ ಕೆಲಸ ಮೇ ೨೨, ೨೦೨೨ ವರೆಗೆ ಮಾಡಲಾಗುವುದು, ಎಂದು ಹೇಳಿತು. ಕೊನೆಗೆ ಆಗಸ್ಟ್ ೨೮, ೨೦೨೨ ರಂದು ಕಟ್ಟಡ ನೆಲಸಮ ಮಾಡಲು ನಿರ್ಧರಿಸಲಾಯಿತು.

ಕಟ್ಟಡಗಳು ಹೇಗೆ ನೆಲಸಮ ಮಾಡಲಾಯಿತು ?

ಕಟ್ಟಡ ನೆಲಸಮ ಮಾಡಲು ಭಾರತದ ‘ಎಡಿಪಿಎಸ್’ ಮತ್ತು ದಕ್ಷಿಣ ಆಫ್ರಿಕಾದ ‘ಜೆಟ್ ಡಿಮಾಲಾಶಿನ್’ ಕಂಪನಿಗಳಿಗೆ ಕೆಲಸ ನೀಡಲಾಗಿತ್ತು. ‘ಎಡಿಫೀಸ್’ನ ಸಂಚಾಲಕ ಉತ್ಕರ್ಷ ಮಹೇಶ್ವರಿ ಇವರ ಪ್ರಕಾರ, ಒಂದು ಕಟ್ಟಡ ೨೯ ಮತ್ತು ಎರಡನೇ ೩೨ ಅಂತಸ್ತಿನದ್ದಾಗಿತ್ತು. ಎರಡರಲ್ಲಿ ೯ ಸಾವಿರ ೮೦೦ ರಂದ್ರಗಳನ್ನು ಮಾಡಲಾಗಿತ್ತು. ಪ್ರತಿಯೊಂದು ರಂದ್ರದಲ್ಲಿ ೧ ಸಾವಿರ ೪೦೦ ಗ್ರಾಂ ಸ್ಪೋಟಕ ಪುಡಿ ಹಾಕಲಾಗಿತ್ತು. ಇದರಲ್ಲಿ ಒಟ್ಟು ಮೂರು ಸಾವಿರದ ೭೦೦ ಕೆಜಿ ಸ್ಪೋಟಕಗಳನ್ನು ಉಪಯೋಗಿಸಲಾಯಿತು. ಇದರಲ್ಲಿ ೩೨೫ ಕಿಲೋ ಸೂಪರ್ ಪವರ್ ಜೆಲ್, ೬೩ ಸಾವಿರದ ೩೦೦ ಮೀಟರ್ ಸೋಲಾರ್ ಕಾರ್ಡ್, ಸಾಫ್ಟ್ ಟ್ಯೂಬ್, ಜಿಲೇಟಿನ ರಾಡ್, ೧೦ ಸಾವಿರದ ೯೦೦ ಡಿಟೋನೇಟರ್ ಮತ್ತು ೬ ಐಈಡಿ (ಒಂದು ಪ್ರಕಾರದ ಸ್ಫೋಟಕ) ಇವು ಒಳಗೊಂಡಿದ್ದೆವು. ಅದರ ನಂತರ ಸ್ಪೋಟಿಸಲಾಯಿತು.

ಸಂಪಾದಕೀಯ ನಿಲುವು

ಅಕ್ರಮ ಕಟ್ಟಡ ಕಟ್ಟಲು ಭ್ರಷ್ಟ ಸರಕಾರಿ ಅಧಿಕಾರಿ, ಆಡಳಿತ ಸಹಾಯ ಮಾಡುತ್ತದೆ ಮತ್ತು ಜನರಿಗೆ ಇದನ್ನು ವಿರೋಧಿಸಲು ಕಾನೂನರೀತ್ಯ ಹೋರಾಡಬೇಕಾಗುತ್ತದೆ, ಆಗ ಇಂತಹ ಕ್ರಮ ಜರುಗಿಸಲಾಗುತ್ತದೆ ! ಮುಲತಃ ಪ್ರಾಮಾಣಿಕ ಅಧಿಕಾರಿ ಮತ್ತು ಆಡಳಿತ ತರಲು ಧರ್ಮಚರಣಿ ಜನರ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !