ಕಾಂಗ್ರೆಸ್‌ನ ಮಹಿಳಾ ನಾಯಕಿ ಆಯಶ್ ಫರಹಿನ್ ಇವರಿಂದ ಟಿ. ರಾಜಾ ಸಿಂಹ ಇವರಿಗೆ ಕೊಲ್ಲುವ ಬೆದರಿಕೆ

ಕಾಂಗ್ರೆಸ್‌ನ ನಾಯಕಿ ಆಯಶ ಫಹರಿನ್ ಮತ್ತು ಟಿ. ರಾಜಾ ಸಿಂಹ

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಭಾಜಪದಿಂದ ಅಮಾನತು ಗೊಂಡಿರುವ ಶಾಸಕ ಟಿ. ರಾಜಾ ಸಿಂಹ ಇವರನ್ನು ಪೊಲೀಸರು ತಥಾಕಥಿತ ಮಹಮ್ಮದ್ ಪೈಗಂಬರರನ್ನು ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈಗ ಈ ಪ್ರಕರಣದಲ್ಲಿ ಮತಾಂಧರಿಂದ ಟಿ. ರಾಜಾ ಸಿಂಹ ಇವರನ್ನು ಬಹಿರಂಗವಾಗಿ ಕೊಲ್ಲುವ ಬೆದರಿಕೆ ನೀಡಲಾಗುತ್ತಿದೆ. ಇಲ್ಲಿಯ ಕಾಂಗ್ರೆಸ್‌ನ ನಾಯಕಿ ಆಯಶ ಫಹರಿನ್ ಮತ್ತು ಇವರ ಇತರರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು ಟಿ. ರಾಜಾ ಸಿಂಹ ಇವರನ್ನು ಬಹಿರಂಗವಾಗಿ ಕೊಲ್ಲುವ ಬೆದರಿಕೆ ನೀಡುತ್ತಿದ್ದಾರೆ. ‘ನಾಲಿಗೆ ಸೀಳಿ ಕೊಲ್ಲುವೆವು’, ‘ಕಾಲಿನ ಮೇಲೆ ಕಾಲಿಟ್ಟು ಸೀಳುವೆವು’, ‘ನಿಮ್ಮನ್ನು ಯಾರು ಗುರುತಿಸಲಾಗಂತಹ ಸ್ಥಿತಿ ಮಾಡುವೆವು’, ಈ ರೀತಿಯಲ್ಲಿ ಆಯಶ ಬೆದರಿಕೆ ನೀಡುತ್ತಿದ್ದಾರೆ.

೧. ಕಾಂಗ್ರೆಸ್ ನಾಯಕಿ ಆಯಶ ಪರವಿನ್ ಇವರ ವಿಡಿಯೋದಲ್ಲಿ ಅವರು ಬುರ್ಖಾ ಧರಿಸಿದ್ದಾರೆ. ಅವರು ಟಿ. ರಾಜಾ ಸಿಂಹ ಇವರಿಗೆ ಅವಾಚ್ಯ ಪದಗಳಲ್ಲಿ ಬೈಯುತ್ತಿದ್ದಾರೆ ಹಾಗೂ ಅವರು ಶಿರಚ್ಛೇದ ಮಾಡುವ ಬೆದರಿಕೆ ನೀಡುತ್ತಿದ್ದಾರೆ. ಅದರಲ್ಲಿ ಅವರು, ರಾಜಾ ಸಿಂಹ ಇವರು ಪೈಗಂಬರರ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ, ಅದಕ್ಕೆ ತೆಲಂಗಾಣದ ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಬೆಂಬಲವಿದೆ. ಒಂದು ವೇಳೆ ಈ ಪಕ್ಷದ ಬೆಂಬಲ ಇಲ್ಲದ್ದಿದ್ದರೆ, ಟಿ. ರಾಜಾ ಸಿಂಹ ಇವರು ಈ ರೀತಿ ರಾಜಾರೋಷವಾಗಿ ಹೇಳಿಕೆ ನೀಡುತ್ತಿರಲಿಲ್ಲ. ತೆಲಂಗಾಣ ಸರಕಾರ ರಾಜ್ಯದಲ್ಲಿ ಧಾರ್ಮಿಕ ಒಡಕು ನಿರ್ಮಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.

೨. ಇನ್ನೊಂದು ವಿಡಿಯೋದಲ್ಲಿ ಭಾಗ್ಯನಗರದ ರಸ್ತೆಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಕಾಣುತ್ತಿದ್ದಾರೆ. ಇದರಲ್ಲಿ ಅವರು ‘ಅಲ್ಲಾಹು ಅಕ್ಬರ್’ (ಅಲ್ಲಾ ಶ್ರೇಷ್ಠನಾಗಿದ್ದಾನೆ) ಎಂಬ ಘೋಷಣೆ ನೀಡುತ್ತಿರುವುದು ಕಾಣುತ್ತದೆ. ಜೊತೆಗೆ ಪೈಗಂಬರರನ್ನು ಅವಮಾನಿಸುವವರೆಗೆ ಒಂದೇ ಶಿಕ್ಷೆ ಶಿರಚ್ಛೇದ’, ಈ ರೀತಿಯ ಘೋಷಣೆಯು ಸಹ ನೀಡುತ್ತಿದ್ದಾರೆ. ರಾಜಾ ಸಿಂಹ ಇವರನ್ನು ಕೊಲ್ಲಲು ಒತ್ತಾಯಿಸಲಾಗುತ್ತದೆ.

ಸಂಪಾದಕೀಯ ನಿಲುವು

ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಇಂತಹವರ ಮೇಲೆ ಕ್ರಮ ಕೈಗೊಳ್ಳುವುದೇ ಅಥವಾ ಓಲೈಕೆಗಾಗಿ ಅದರ ಕಡೆಗೆ ನಿರ್ಲಕ್ಷ ಮಾಡುವರೇ ?