ಔರಂಗಜೇಬನು ಜ್ಞಾನವಾಪಿಯ ಸಂಪತ್ತಿಯನ್ನು ದಾನ ಮಾಡಿದ ನಂತರ ಅಲ್ಲಿ ಮಸೀದಿ ಕಟ್ಟಲಾಗಿದೆ ! (ಅಂತೆ) – ಮುಸಲ್ಮಾನ ಪಕ್ಷದ ಹುರುಳಿಲ್ಲದ ಹೇಳಿಕೆ

ಜ್ಞಾನವಾಪಿ ಮೊಕ್ಕಾದಮೆ

ವಾರಣಾಸಿ (ಉತ್ತರಪ್ರದೇಶ) – ೧೬೬೯ ರಲ್ಲಿ ಮೊಗಲ ಬಾದಶಾಹಾ ಔರಂಗಜೇಬ ಆಳುತ್ತಿದ್ದನು. ಆದ್ದರಿಂದ ಆ ಸಮಯದಲ್ಲಿ ಏನೆಲ್ಲಾ ಸಂಪತ್ತಿ ಇತ್ತು ಅದೆಲ್ಲವೂ ಬಾದಶಾಹ ಔರಂಗಜೇಬನದಾಗಿತ್ತು. ಯಾವಾಗ ಔರಂಗಜೇಬನು ಜ್ಞಾನವಾಪಿಯ ಸಂಪತ್ತಿ ದಾನ ಮಾಡಿದನೋ, ಆಗ ಅಲ್ಲಿ ಮಸೀದಿ ಕಟ್ಟಲಾಯಿತು ಎಂದು ಮುಸಲ್ಮಾನ ಪಕ್ಷದವರಾದ ‘ಅಂಜುಮನ್ ಇಂತೆಜಾಮಿಯ ಮಸೀದಿ ಕಮಿಟಿ’ಯು ಜ್ಞಾನ ವಾಪಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹುರುಳಿಲ್ಲದ ಹೇಳಿಕೆ ನೀಡಿದೆ. ಈ ಬಗ್ಗೆ ‘ಔರಂಗಜೇಬನು ಜ್ಞಾನವಾಪಿ ಮಸೀದಿಯ ಆಸ್ತಿಯನ್ನು ದಾನ ಮಾಡಿದ್ದರೆ, ಅದರ ದಾಖಲೆಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಬೇಕೆಂದು’ ಹಿಂದೂ ಪಕ್ಷದವರ ಐದು ಮಹಿಳೆಯರು ಒತ್ತಾಯಿಸಿದ್ದಾರೆ. ಅದರ ಜೊತೆಗೆ ಜ್ಞಾನವಾಪಿ ಆಸ್ತಿಯನ್ನು ವಕ್ಫದ ಸಂಪತ್ತಿ ಎಂದುಕೊಳ್ಳುವುದು ದೊಡ್ಡ ಮೋಸವಾಗಿದೆ ಎಂದು ಈ ಮಹಿಳೆಯರ ಅಭಿಪ್ರಾಯವಾಗಿದೆ.

ಈಗಿನ ಸರಕಾರ ೩ ಸಾವಿರ ಮಸೀದಿಗಳು ವಶಕ್ಕೆ ಪಡೆಯಬೇಕು ! – ಸ್ವಾಮೀ ಜಿತೇಂದ್ರನಂದ ಸರಸ್ವತಿ

ಅಖಿಲ ಭಾರತೀಯ ಸಂತ ಸಮಿತಿಯ ಕಾರ್ಯದರ್ಶಿ ಸ್ವಾಮೀ ಜಿತೆಂದ್ರನಂದ ಸರಸ್ವತಿ ಇವರು ಮುಸಲ್ಮಾನ ಪಕ್ಷದವರ ಯುಕ್ತಿವಾದದ ಬಗ್ಗೆ ಹೇಳುವಾಗ, ‘ಅವರ ತಂದೆ ಸ್ವರ್ಗದಿಂದ ಭೂಮಿಯನ್ನು ತಂದಿದ್ದರು, ಒಂದು ವೇಳೆ ಮುಸಲ್ಮಾನ ಪಕ್ಷದವರು ಜ್ಞಾನವಾಪಿ ಸಂದರ್ಭದಲ್ಲಿ ‘ಸರಕಾರ ಮತ್ತು ಅಧಿಕಾರ ಯಾರ ಹತ್ತಿರ ಇರುತ್ತದೆ ಅವರ ಭೂಮಿ ಎಂದು ವಾದಿಸಿದರೆ, ನಾವು ಪ್ರಸ್ತುತ ಸರಕಾರದ ಮೇಲೆ ಒತ್ತಡ ಹೇರಬಹುದು. ಹೀಗೆ ಮಾಡಿದರೆ ದೇವಸ್ಥಾನಗಳನ್ನು ಕೆಡವಿ ಮೂರು ಸಾವಿರ ಮಸೀದಿಗಳು ಎಲ್ಲೆಲ್ಲಿ ಕಟ್ಟಲಾಗಿದೆ, ಅದನ್ನು ಸರಕಾರ ವಶಪಡಿಸಿಕೊಳ್ಳಬೇಕು. ಮುಸಲ್ಮಾನರು ಈ ರೀತಿ ಯುಕ್ತಿವಾದ ಮಾಡಿದರೆ, ಅದರಂತೆ ಇದೇ ಯೋಗ್ಯವಾಗಿರುವುದು; ಆದ್ದರಿಂದ ಮುಸಲ್ಮಾನರು ಈ ರೀತಿ ಕುಕೃತ್ಯ ನಡೆಸದೇ ಇದ್ದರೆ ಒಳ್ಳೆಯದು. ಇಲ್ಲವಾದರೆ ಅದರ ಪರಿಣಾಮ ಅವರು ದೀರ್ಘಕಾಲ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಅವರ ಹಕ್ಕಿನ ಧಾರ್ಮಿಕ ಸ್ಥಳಗಳು ಸಿಗಬಾರದೆಂದು, ಮುಸಲ್ಮಾನರು ಯಾವ ರೀತಿ ದಾವೆ ಮಾಡುತ್ತಿದ್ದಾರೆ ಇದು ಇದರಿಂದ ಸ್ಪಷ್ಟವಾಗುತ್ತಿದೆ ! ‘ಹಿಂದೂ ಮುಸಲ್ಮಾನ್ ಭಾಯಿ ಭಾಯಿ’ಯ ಘೋಷಣೆ ನೀಡುವವರು ಈ ವಿಷಯವಾಗಿ ಏನು ಹೇಳುವರು ?