ಕಾಶ್ಮೀರದಲ್ಲಿರುವ ಹೊರಗಿನ ನಾಗರಿಕರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯಕ್ಕೆ ವಿವಿಧ ಕಾಶ್ಮೀರಿ ಪಕ್ಷಗಳ ವಿರೋಧ

ಶ್ರೀನಗರ – ಕಾಶ್ಮೀರದಲ್ಲಿರುವ ಹೊರಗಿನ ನಾಗರಿಕರಿಗೆ ಮತದಾನದ ಅಧಿಕಾರ ನೀಡುವ ನಿರ್ಧಾರಕ್ಕೆ ಕಾಶ್ಮೀರದಲ್ಲಿನ ವಿವಿಧ ಪಕ್ಷಗಳು ವಿರೋಧಿಸಿದೆ. ಈ ಹಿನ್ನಲೆಯಲ್ಲಿ ‘ನ್ಯಾಷನಲ್ ಕಾನ್ಫರೆನ್ಸ್’ನ ಅಧ್ಯಕ್ಷ ಫಾರೂಖ ಅಬ್ದುಲ್ಲಾ ಇವರ ನಿವಾಸದಲ್ಲಿ ‘ಪೀಪಲ್ಸ್ ಡೆಮೋಕ್ರೊಟಿಕ್ ಪಾರ್ಟಿ’ಯ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಕಾಂಗ್ರೆಸ್‌ನ ಜಮ್ಮು ಕಾಶ್ಮೀರ ವಿಭಾಗದ ಅಧ್ಯಕ್ಷ ವಿಕಾರ ರಸೂಲ್, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಎಂ.ವೈ. ತಾರೀಗಾಮಿ ಸಹಿತ ಶಿವಸೇನೆ, ಅವಮಿ ನ್ಯಾಷನಲ್ ಕಾನ್ಫರೆನ್ಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ, ಸಂಯುಕ್ತ ಜನತಾದಳ ಮತ್ತು ಅಕಾಲಿದಳ ಈ ಪಕ್ಷಗಳ ಪ್ರತಿನಿಧಿಗಳ ಸಭೆ ಆಯೋಜಿಸಲಾಗಿತ್ತು. ‘ಪೀಪಲ್ಸ್ ಕಾನ್ಫರೆನ್ಸ್’ನ ಸಜ್ಜಾದ ಲೋನ್ ಮತ್ತು ‘ಅಪನಾ ಪಕ್ಷ’ದ ನಾಯಕ ಅಲ್ತಾಫ್ ಬುಖಾರಿ ಇವರು ಈ ಸಭೆಯನ್ನು ಬಹಿಷ್ಕರಿಸಿದ್ದರು.

ಈ ಸಮಯದಲ್ಲಿ ಫಾರುಖ ಅಬ್ದುಲ್ಲಾರವರು, “ಜಮ್ಮು ಕಾಶ್ಮೀರದ ಮತದಾರರ ಪಟ್ಟಿಯಲ್ಲಿ ಕಾಶ್ಮೀರದಲ್ಲಿರುವ ಹೊರಗಿನ ನಾಗರೀಕರ ಸಮಾವೇಶಗೊಳಿಸುವ ನಿರ್ಧಾರ ಇಲ್ಲಿಯ ರಾಜಕೀಯ ಪಕ್ಷಗಳಿಗೆ ಒಪ್ಪಿಗೆ ಇಲ್ಲ. ಆದ್ದರಿಂದ ಜಮ್ಮು ಕಾಶ್ಮೀರದ ಪ್ರತ್ಯೇಕತೆಯ ಗುರುತು ನಾಶವಾಗುವುದು. ಈ ನಿರ್ಧಾರದಿಂದ ಜಮ್ಮು ಕಾಶ್ಮೀರ ವಿಧಾನಸಭೆಯು ‘ಹೊರಗಿನ’ ಜನರ ಕೈ ಸೇರುವುದು ಮತ್ತು ಇಲ್ಲಿಯ ಜನರು ವಂಚಿತರಾಗುವವರು. ನಾವು ಈ ನಿರ್ಧಾರಕ್ಕೆ ಕಾನೂನಿನ ಮಾರ್ಗದಲ್ಲಿ ಪ್ರಶ್ನಿಸುವೆವು; ಆದರೆ ವಿವಿಧ ಪ್ರಕಾರದಿಂದ ವಿರೋಧ ಸಹ ಮಾಡುವೆವು.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಕಾಶ್ಮೀರದಲ್ಲಿನ ಪಕ್ಷಗಳಿಗೆ ಜಾತ್ಯತೀತದ ಉಪದೇಶ ಏಕೆ ನೀಡುವುದಿಲ್ಲ ?