ಮುಸಲ್ಮಾನ ಸಂಘಟನೆಯಿಂದ ವಿರೋಧ
ಈ ರೀತಿಯ ವಿರೋಧವು ಶಾಶ್ವತವಾಗಿ ನಿಲ್ಲಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ !
ಬೆಂಗಳೂರು – ಕರ್ನಾಟಕದ ಶಾಲೆಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು ರಾಜ್ಯದ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಆಗಸ್ಟ್ ೩೧ ರಂದು ಶ್ರೀ ಗಣೇಶಚತುರ್ಥಿ ಆಚರಿಸಬೇಕೆಂದು ಕರೆ ನೀಡಿದ್ದಾರೆ. ಇದರ ಬಗ್ಗೆ ಮುಸಲ್ಮಾನ ಸಂಘಟನೆಗಳು ಟೀಕಿಸುತ್ತಿವೆ. ಮುಸಲ್ಮಾನ ವಿದ್ಯಾರ್ಥಿನಿಯರ ಶಾಲೆ ಮತ್ತು ಮಹಾವಿದ್ಯಾಲಯದ ಆವರಣದಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ಧರಿಸಲು ನಿಷೇಧಿಸಲಾಗಿದೆ, ಹಾಗಾದರೆ ಶ್ರೀ ಗಣೇಶಚತುರ್ಥಿ ಆಚರಿಸಲು ಏಕೆ ಅನುಮತಿ ನೀಡಲಾಗುತ್ತಿದೆ ?’ ಎಂಬ ಪ್ರಶ್ನೆ ಕೇಳಲಾಗುತ್ತಿದೆ.
Karnataka Minister says schools, colleges can celebrate Ganesh Chaturthi, draws flak#Karnataka https://t.co/2qS6CACr1M
— TheNewsMinute (@thenewsminute) August 18, 2022
ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ ಸೈಯಿದ ಮಿಯಿನ್ ಪ್ರಕಾರ ಶಿಕ್ಷಣ ಸಚಿವರು ಸರಕಾರಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಗಣೇಶಮೂರ್ತಿ ಸ್ಥಾಪಿಸಲು ಅನುಮತಿ ನೀಡುವುದು ಎಂದರೆ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನವಾಗಿದೆ. ಇದು ಖಂಡನೀಯ ಮತ್ತು ಲಜ್ಜಾಸ್ಪದವಾಗಿದೆ. ತಮಾಷೆ ಎಂದರೆ ಅದೇ ಸಚಿವರು, ‘ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಪರಂಪರೆಗಳಿಗೆ ಅನುಮತಿ ನೀಡುವುದಿಲ್ಲ’ ಎಂದು ಈ ಮೊದಲು ಹೇಳಿದ್ದರು. ಆದ್ದರಿಂದ ಅನ್ಯ ಧರ್ಮೀಯ ವಿದ್ಯಾರ್ಥಿಗಳ ಭಾವನೆಗೆ ನೋವಾಗುವುದಿಲ್ಲವೇ ?’, ಎಂದಿದ್ದಾರೆ.