ಅಂಜುಮನ ಇಂತಜಾಮಿಯ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ

ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನದ ಪ್ರಕರಣ

ವಾರಣಾಸಿ ( ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನ ಇದರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರ ಇರುವ ಅಂಜುಮನ್ ಇಂತಿಜಾಮಿಯಾ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ವಿಳಂಬ ಮಾಡಿರುವುದರಿಂದ ಈ ದಂಡ ವಿಧಿಸಲಾಗಿದೆ. ಈ ಮೊಕದ್ದಮೆಯ ಮುಂದಿನ ವಿಚಾರಣೆ ಆಗಸ್ಟ್ ೨೨ ರಂದು ನಡೆಯುವುದು.