ಅಲವರ (ರಾಜಸ್ಥಾನ)ನಲ್ಲಿ ಮತಾಂಧ ಮುಸಲ್ಮಾನರಿಂದ ಚಿರಂಜೀಲಾಲರ ‘ಸಮೂಹ ಹತ್ಯೆ’ !

ಚಿರಂಜೀಲಾಲ

ಅಲವರ (ರಾಜಸ್ಥಾನ) – ಇಲ್ಲಿಯ ಮತಾಂಧ ಮುಸಲ್ಮಾನರಿಂದ ಒಬ್ಬ ಹಿಂದೂವಿನ ಸಾಮೂಹ ಹತ್ಯೆ(ಮೋಬ ಲಿಚಿಂಗ್) ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ ೧೪ ರಂದು ಇಲ್ಲಿಯ ಅಲವರ ಜಿಲ್ಲೆಯ ಗೋವಿಂದಗಡ ರಾಮಬಾಸ ಗ್ರಾಮದಲ್ಲಿ ಚಿರಂಜೀಲಾಲ ಎಂಬ ತರಕಾರಿ ಮಾರುವ ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್ ಕಳ್ಳತನ ಮಾಡಿರುವ ಆರೋಪ ಹೊರಿಸಿ ೨೦-೨೫ ಮತಾಂಧ ಮುಸಲ್ಮಾನರು ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ೪೫ ವಯಸ್ಸಿನ ಚಿರಂಜೀಲಾಲ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಸಮಯದಲ್ಲಿ ಅವರು ಸಾವನ್ನಪ್ಪಿದರು.


೧. ಈ ಘಟನೆಯಿಂದ ಆಕ್ರೋಶಗೊಂಡಿರುವ ಅವರ ಕುಟುಂಬದವರು ೫೦ ಲಕ್ಷ ರೂಪಾಯ ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ನೌಕರಿ ನೀಡುವ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಖಂಡಿಸುತ್ತಾ ಆಗಸ್ಟ್ ೧೬ ರಂದು ಗೋವಿಂದಗಡದ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಲಾಗಿತ್ತು.

೨. ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಚಿರಂಜೀಲಾಲ ಇವರ ಮಗ ಯೋಗೇಶ ಇವರ ಅಭಿಪ್ರಾಯ, ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬದಲು ಅವರನ್ನು ಬಿಟ್ಟು ಬಿಟ್ಟಿದ್ದಾರೆ. (ಹಿಂದೂಗಳಿಗೆ ಸಂಯಮದಿಂದ ವರ್ತಿಸುವುದನ್ನು ಕಲಿಸುವ ಕಾಂಗ್ರೆಸ್ ರಾಜ್ಯದಲ್ಲಿ ಪೊಲೀಸರಿಂದ ಇನ್ನೇನು ಅಪೇಕ್ಷೆ ಇರಲು ಸಾಧ್ಯ ? – ಸಂಪಾದಕರು) ಆಗಸ್ಟ್ ೧೬ ರಂದು ಚಿರಂಜೀಲಾಲ ಅವರ ಕುಟುಂಬದವರು ಅವರ ಅಂತ್ಯಸಂಸ್ಕಾರ ಮಾಡುವ ಮೊದಲು ಬೇಡಿಕೆ ಪೂರೈಸಲು ರಸ್ತೆ ತಡೆ ನಡೆಸಿದರು.

ರಾಜಸ್ಥಾನ, ‘ಪಾಕಿಸ್ತಾನ’ ಆಗುತ್ತಿದೆ ! – ಭಾಜಪದ ಆರೋಪ

ಭಾಜಪದ ರಾಜಸ್ಥಾನದ ಮುಖಂಡ ಅಭಿಷೇಕ ಆಚಾರ್ಯ ಕುಲಶ್ರೇಷ್ಠ ಇವರು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿ ನಿಷೇಧಿಸಿದ್ದಾರೆ. ಅವರು, ರಾಜಸ್ಥಾನ ಪಾಕಿಸ್ತಾನವಾಗುತ್ತಿದೆ. ಎಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಅಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆ ಆಗುತ್ತಿದೆ. ಸಂಪೂರ್ಣ ರಾಜಸ್ಥಾನದಲ್ಲಿ ಹಿಂದೂಗಳು ಅಸುರಕ್ಷಿತವಾಗಿದ್ದಾರೆ; ಆದರೆ ಮುಖ್ಯಮಂತ್ರಿ ಅಶೋಕ ಗಹಲೋತ್ ಇವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

  • ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳು ಅಸುರಕ್ಷಿತವಾಗುತ್ತಿದ್ದಾರೆ !
  • ನೂಹ (ಹರಿಯಾಣ) ಇಲ್ಲಿಯ ‘ಪಹಲು ಖಾನ’ ಅಥವಾ ದಾದರಿ (ಉತ್ತರಪ್ರದೇಶ) ಇಲ್ಲಿಯ ‘ಅಖಲಾಖ’ ಇವರ ಮೇಲೆ ಹಿಂದೂಗಳಿಂದ ತಥಾ ಕಥಿತ ಹತ್ಯೆಯ ಆರೋಪ ಮಾಡುತ್ತಾ ಆಕಾಶ ಪಾತಾಳ ಒಂದು ಮಾಡುವ ಜಾತ್ಯತೀತರು ಗುಂಪಿನ ಬಗ್ಗೆ ಮೌನ ಏಕೆ ? ‘ಚಿರಂಜೀಲಾಲ್ ಹಿಂದೂ ಆಗಿದ್ದು, ಹತ್ಯೆ ಮಾಡುವವರು ಮತಾಂಧ ಮುಸಲ್ಮಾನರಾಗಿದ್ದಾರೆ, ಆದ್ದರಿಂದ ಈ ಹತ್ಯೆ ಯೋಗ್ಯವಾಗಿದೆ, ಎಂದು ಅವರ ಅಭಿಪ್ರಾಯವೇ ?