‘ನೂಪುರ ಶರ್ಮಾರವರಿಗೆ ಈಶನಿಂದೆಯ ಶಿಕ್ಷೆ ನೀಡಿ ‘ಸಂರಕ್ಷಣಾ ಜಿಹಾದ’ ಮಾಡಿ !’

ಅಲ್‌-ಕಾಯದಾದಿಂದ ಭಾರತದಲ್ಲಿನ ಮುಸಲ್ಮಾನರಿಗೆ ಎಚ್ಚರಿಕೆ !

ನವದೆಹಲಿ – ಈಗ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಅಲ್‌-ಕಾಯದಾವು ಭಾರತದಲ್ಲಿನ ಮುಸಲ್ಮಾನರಿಗೆ ‘ಭಾಜಪದ ಮಾಜಿ ರಾಷ್ಟ್ರೀಯ ವಕ್ತಾರರಾದ ನೂಪುರ ಶರ್ಮಾರವರನ್ನು ಈಶನಿಂದೆಗಾಗಿ ಶಿಕ್ಷಿಸಿ’ ಎಂದು ಎಚ್ಚರಿಕೆ ನೀಡಿದೆ. ಅಲ್‌-ಕಾಯದಾದ ವಾರ್ತಾಪತ್ರಿಕೆಯಾದ ‘ನವಾ-ಎ-ಘವಾ-ಎ-ಹಿಂದ’ ನ ಮಾಧ್ಯಮದಿಂದ ಈ ಎಚ್ಚರಿಕೆಯನ್ನು ನೀಡಲಾಗಿದ್ದು ಇದನ್ನು ‘ಸಂರಕ್ಷಣಾ ಜಿಹಾದ’ ಎಂದು ಕರೆಯಲಾಗಿದೆ. ಕೆಲವು ದಿನಗಳ ಹಿಂದೆ ಭಾರತೀಯ ಮೂಲದ ಅಮೇರಿಕಾದ ಲೇಖಕರಾದ ಸಲಮಾನ ರಶ್ದಿಯವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ನಂತರ ಭಾರತದಲ್ಲಿನ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಈಗಾಗಲೇ ನೂಪುರ ಶರ್ಮಾರವರ ಸಂದರ್ಭದಲ್ಲಿ ಸತರ್ಕರಾಗಿದ್ದಾರೆ. ಅದರಲ್ಲಿಯೇ ‘ಅಲ್‌-ಕಾಯದಾದ ಈ ಬೆದರಿಕೆಯು ಸ್ಥಿತಿಯನ್ನು ಇನ್ನೂ ಗಂಭೀರವಾಗಿಸಬಹುದು’, ಎಂದು ಹೇಳಲಾಗುತ್ತಿದೆ.


ಮಹಂಮದ ಪೈಗಂಬರರವರ ವಿರುದ್ಧ ಮಾಡಲಾದ ಕಥಿತ ಆಕ್ಷೇಪಾರ್ಹ ಟಿಪ್ಪಣಿಯಿಂದ ಜಗತ್ತಿನಾದ್ಯಂತ ಇರುವ ಮುಸಲ್ಮಾನ ದೇಶಗಳು, ಹಾಗೆಯೇ ಮತಾಂಧ ಮುಸಲ್ಮಾನರು ಮೊದಲೇ ನೂಪುರ ಶರ್ಮಾರವರ ‘ಸರ ತನ ಸೆ ಜುದಾ’ ಮಾಡುವ (ರುಂಡ ಕತ್ತರಿಸುವ) ಬೆದರಿಕೆ ನೀಡುತ್ತ ಬಂದಿವೆ.

ಅಲ್‌-ಕಾಯದಾವು ತನ್ನ ವೃತ್ತಪತ್ರಿಕೆಯ ಸದ್ಯದ ಪ್ರತಿಯಲ್ಲಿ ಈ ರೀತಿಯಾಗಿ ಹೇಳಿದೆ…

೧. ಭಾರತೀಯ ಮುಸಲ್ಮಾನರು ನೂಪುರ ಶರ್ಮಾರವರೊಂದಿಗೆ ಸೇಡು ತೀರಿಸಿಕೊಳ್ಳಬೇಕು. ಇದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಅವುಗಳ ಬಳಕೆಯ ತರಬೇತಿಯನ್ನು ಪಡೆಯಬೇಕು. ಅಲ್‌-ಕಾಯದಾವು ಇದಕ್ಕೆ ‘ಸಂರಕ್ಷಣಾ-ಜಿಹಾದ’ ಎಂದು ನಾಮಕರಣ ಮಾಡಿದೆ.

೨. ಭಾರತೀಯ ಮುಸಲ್ಮಾನರು ಕಾಶ್ಮೀರದಲ್ಲಿನ ನಡೆಯುತ್ತಿರುವ ಜಿಹಾದಿ ಕಾರ್ಯಾಚರಣೆಗಳಲ್ಲಿ ಸಹಭಾಗಿಯಾಗಬೇಕು.

೩. ಮುಸಲ್ಮಾನರು ಮಹಂಮದ ಪೈಗಂಬರರನ್ನು ವಿರೋಧಿಸುವ ನೂಪುರ ಶರ್ಮಾರವರೊಂದಿಗೆ ಸೇಡು ತೀರಿಸಿಕೊಳ್ಳದಿದ್ದರೆ ಮುಸಲ್ಮಾನರ ಸ್ಥಿತಿಯು ದಯನೀಯವಾಗಲಿದೆ.

೪. ಈ ಹಿಂದೆ ಜೂನ ತಿಂಗಳಿನಲ್ಲಿಯೂ ಅಲ್‌-ಕಾಯದಾವು ನೂಪುರ ಶರ್ಮಾರವರೊಂದಿಗೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದಾಗಿ ಘೋಷಿಸಿತ್ತು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕ ಸಂಘಟನೆ, ಹಾಗೆಯೇ ಅವುಗಳನ್ನು ಸಮರ್ಥಿಸುವ ಮುಸಲ್ಮಾನರ ವಿರುದ್ಧ ಕಠೋರ ಕಾರ್ಯಾಚರಣೆ ಮಾಡಲು ಈಗ ಕೇಂದ್ರ ಸರಕಾರವು ಟೊಂಕ ಕಟ್ಟಿ ನಿಲ್ಲುವುದು ಆವಶ್ಯಕವಾಗಿದೆ !