ಸ್ವಾತಂತ್ರ್ಯ ದಿನದಂದು ಉತ್ತರ ಪ್ರದೇಶದ ಲಕ್ಷ್ಮಣಪುರಿ ಮತ್ತು ಪ್ರಯಾಗರಾಜದಲ್ಲಿ ಹಿಂಸಾಚಾರ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ದೇಶದ ೭೫ ನೇ ಸ್ವಾತಂತ್ರ್ಯ ದಿನದಂದು ಇಲ್ಲಿಯ ಬಂಗಲಾ ಮಾರುಕಟ್ಟೆಯಲ್ಲಿ ಕೆಲವರು ತಿರಂಗಾ ಯಾತ್ರೆ ನಡೆಸಿದರು. ಆ ಸಮಯದಲ್ಲಿ ಇನ್ನೊಂದು ಗುಂಪಿನ ಜೊತೆ ವಿವಾದ ನಡೆಯಿತು. ಮಾತಿನ ಚಕಮಕಿಯು ಹೊಡೆದಾಟ ಮತ್ತು ಕಲ್ಲುತೂರಾಟಕ್ಕೆ ರೂಪಾಂತರಗೊಂಡಿತು. ಇನ್ನೊಂದು ಘಟನೆ ಪ್ರಯಾಗರಾಜದಲ್ಲಿ ನಡೆದಿದೆ. ಇಲ್ಲಿಯ ತಿರಂಗಾ ಯಾತ್ರೆಯಲ್ಲಿ ‘ಡಿಜೆ’(ದೊಡ್ಡ ಧ್ವನಿವರ್ಧಕ) ಹಾಕಿದ್ದ ಯುವಕನ ಮೇಲೆ ಗುಂಡು ಹಾರಿಸಲಾಯಿತು. ಈ ಘಟನೆ ಘುರಪೂರ ಗ್ರಾಮದಲ್ಲಿ ನಡೆದಿದೆ. ಯುವಕನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಅವನ ಆರೋಗ್ಯ ಚಿಂತಾ ಜನಕವಾಗಿದೆ.

ಲಕ್ಷ್ಮಣಪುರಿಯಲ್ಲಿ ಸ್ವಾತಂತ್ರ್ಯ ಸಮಾರಂಭದ ಪ್ರಯುಕ್ತ ನಡೆಸಲಾದ ತಿರಂಗಾ ಯಾತ್ರೆಯಲ್ಲಿ ಅಶಿಯನಾದ ಬಂಗಲಾ ಮಾರುಕಟ್ಟೆಯ ಪ್ರದೇಶದಲ್ಲಿ ಶ್ರೀ ಚಂದ್ರಿಕಾ ದೇವಿ ದೇವಸ್ಥಾನದ ಎದುರು ಬಂದಾಗ ಒಂದೇ ಸಮುದಾಯದ ಎರಡು ಗುಂಪಿನ ನಡುವೆ ಘರ್ಷಣೆ ನಡೆಯಿತು. ಆ ಸಮಯದಲ್ಲಿ ಕಲ್ಲು ತೂರಾಟದಿಂದ ಅಂಗಡಿಗಳಿಗೆ ಮತ್ತು ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಪೊಲೀಸರು ಈ ಘಟನೆ ಹಳೆಯ ವಿವಾದದಿಂದ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಅನೇಕರನ್ನು ವಶಕ್ಕೆ ಪಡೆದರೇ ೯ ಜನರ ಜೊತೆಗೆ ೧೪ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರಯಾಗರಾಜದಲ್ಲಿ ತಿರಂಗಾ ಯಾತ್ರೆ ನಡೆಸುವಾಗ ಕ್ಷುಲ್ಲಕ ಕಾರಣದಿಂದ ‘ಡಿಜೆ’ ಚಾಲಕ ಮತ್ತು ತಿರಂಗಾ ಯಾತ್ರೆಯಲ್ಲಿ ಸಹಭಾಗಿರುವ ೨ ಯುವಕರ ನಡುವೆ ವಿವಾದ ನಡೆಯಿತು. ಅದರ ನಂತರ ಒಬ್ಬ ಯುವಕನು ‘ಡಿಜೆ’ ಹಾಕಿರುವವನ ಮೇಲೆ ಗುಂಡು ಹಾರಿಸಿದನು. ಅದರಲ್ಲಿ ಯುವಕ ಗಂಭೀರವಾಗಿ ಗಾಯಗೊಂಡನು. ಗಾಯಗೊಂಡಿರುವವನ ಹೆಸರು ಮನೋಜ್ ಕುಮಾರ್ ಪಟೇಲ ಎಂದಾಗಿದೆ ಹಾಗೂ ಗುಂಡು ಹಾರಿಸಿದವನ ಹೆಸರು ನೀರಜ ಕುಮಾರ ನಿಷಾದ ಎಂದಾಗಿದೆ. ಪೊಲೀಸರು ನೀರಜನನ್ನು ಬಂದಿದ್ದಾರೆ.