ರಾಷ್ಟ್ರಧ್ವಜ ವಿತರಣೆ ಮಾಡಿದ್ದರಿಂದ ಬಡ ಹಿಂದೂ  ಕುಟುಂಬಕ್ಕೆ  ಸರ್ ತನ್ ಸೆ ಜುದಾ ಬೆದರಿಕೆ !

ಬೀಜನೌರ (ಉತ್ತರಪ್ರದೇಶ) ಇಲ್ಲಿಯ ಘಟನೆ

(ಸರ್ ತನ್ ಸೆ ಜುದಾ ಅಂದರೆ ರುಂಡದಿಂದ ದೇಹ ಬೇರೆ ಮಾಡುವುದು)

ಬೀಜನೌರ (ಉತ್ತರಪ್ರದೇಶ): ಭಾರತಕ್ಕೆ ಸ್ವಾತಂತ್ರ್ಯ ದೊರಕಿ ೭೫ ವರ್ಷ ಪೂರ್ಣವಾದ ಪ್ರಯುಕ್ತ ಇಲ್ಲಿಯ ಅರುಣ ಕಶ್ಯಪ ಅಲಿಯಾಸ್ ಅನ್ನು ಇವರ ಬಡ ಕುಟುಂಬದವರು ಪರಿಸರದಲ್ಲಿ ರಾಷ್ಟ್ರಧ್ವಜ ವಿತರಿಸಿದ್ದರು. ಇದರಿಂದ ‘ನಿಮ್ಮ ಶಿರಚ್ಛೇದ ಮಾಡುವೆವು’, ಎಂಬ ಬೆದರಿಕೆಯ ಪತ್ರ ದೊರೆತಿದೆ. ಇದರಿಂದ ಪೂರ್ಣ ಕುಟುಂಬ ಭಯದ ನೆರಳಿನಲ್ಲಿ ಇದೆ. ಪೊಲೀಸರು ಕುಟುಂಬಕ್ಕೆ ಸಂರಕ್ಷಣೆ ನೀಡಿದೆ. ಅಜ್ಞಾತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಅರುಣ ಕಶ್ಯಪ ಇವರು ಇಲ್ಲಿಯ ಬುದ್ಧುಪಾಡಾ ಪ್ರದೇಶದ ಒಂದು ಚಿಕ್ಕ ಮನೆಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ ಆಗಸ್ಟ್ ೧೪ ರ ಬೆಳಿಗ್ಗೆ ಕಶ್ಯಪ್ ಇವರ ಮನೆಯ ಹೊರಗೆ ಗೋಡೆಯ, ‘ಅನ್ನು ನಿನಗೆ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ನೋಡಲು ಬಹಳ ಆನಂದವಾಗುತ್ತಿದೆ. ನಿನ್ನ ರುಂಡವನ್ನು ದೇಹದಿಂದ ಬೇರೆ ಮಾಡಬೇಕಾಗಿದೆ !
ಐಎಸ್ಐನ ಸಹಕಾರಿ, ಹೀಗೆ ಗೋಡೆಯ ಮೇಲೆ ಅಂಟಿಸಿದ್ದ ಈ ಪತ್ರ ಓದಿ ಪೊಲೀಸರಿಗೂ ಆಶ್ಚರ್ಯವಾಗಿದೆ. ಪೊಲೀಸ್ ಅಧೀಕ್ಷಕ ಡಾ. ಪ್ರವೀಣ ರಂಜನ ಸಿಂಹ ಇವರು, ಈ ಪ್ರಕರಣದ ಆಳವಾಗಿ ತನಿಖೆ ಮಾಡಲಾಗುತ್ತಿದೆ ಸಂಬಂಧಿತರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಸ್ವಾತಂತ್ರ್ಯ ದಿನದ  ದ್ವೇಷ ಮಾಡುವರು ಯಾರು ?  ಮತ್ತು ಈ ರೀತಿಯ ಬೆದರಿಕೆ ಏಕೆ ನೀಡುತ್ತಾರೆ ? ಇದು ಎಲ್ಲರಿಗೂ ತಿಳಿದಿದೆ ! ಇಂತಹವರ ಮೇಲೆ ಕಡಿವಾಣ ಹಾಕುವುದು ಅವಶ್ಯಕ !