ಕರ್ನಾಟಕದ ಭಾಜಪ ಸರಕಾರದ ಜಾಹೀರಾತಿನಲ್ಲಿ ನೆಹರು ಅವರ ಜಾಗದಲ್ಲಿ ಸ್ವಾತಂತ್ರ್ಯವೀರ ಸಾವರಕರ ಇವರ ಛಾಯಾಚಿತ್ರ

ಕಾಂಗ್ರೆಸ್‌ನಿಂದ ಟೀಕೆ

ಬೆಂಗಳೂರು – ಕೇಂದ್ರ ಸರಕಾರದ ‘ಹರ ಘರ ತಿರಂಗ’ ಅಭಿಯಾನದ ಅಡಿಯಲ್ಲಿ ಕರ್ನಾಟಕದ ಭಾಜಪ ಸರಕಾರದ ವೃತ್ತ ಪತ್ರಿಕೆಯಲ್ಲಿ ಒಂದು ಜಾಹೀರಾತು ನೀಡಿದ್ದರು. ಅದರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಇವರ ಜಾಗದಲ್ಲಿ ಸ್ವಾತಂತ್ರ್ಯವೀರ ಸಾವರಕರ ಅವರ ಛಾಯಾಚಿತ್ರ ಪ್ರಸಿದ್ಧಿ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿದೆ.

೧. ಭಾಜಪದ ಪ್ರದೇಶ ಸಚಿವ ಎನ್. ರವಿಕುಮಾರ ಇವರು, ನೆಹರು ಎಂದಿಗೂ ಮ. ಗಾಂಧಿಯವರ ಮಾತು ಕೇಳಲಿಲ್ಲ. ಅವರು ದೇಶದ ವಿಭಜನೆಗೆ ಜವಾಬ್ದಾರರಾಗಿದ್ದಾರೆ. ಆದ್ದರಿಂದ ನಾವು ಅವರ ಛಾಯಾಚಿತ್ರ ಜಾಹೀರಾತಿನಲ್ಲಿ ಪ್ರಸಿದ್ಧಿ ಮಾಡಲಿಲ್ಲ ಎಂದು ಹೇಳಿದರು.

೨. ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಇವರು, ಕಾಂಗ್ರೆಸ್ ಗಾಂಧಿ, ನೆಹರು, ಪಟೇಲ ಮತ್ತು ಇತರ ನಾಯಕರು ಅವರ ಪರಂಪರೆ ಮುಂದೆ ಕೊಂಡೊಯ್ಯುವಾಗ ದೇಶ ಒಗ್ಗೂಡಿಸಲು ಪ್ರಯತ್ನಿಸುವುದು. ದ್ವೇಷದ ರಾಜಕಾರಣದ ಸೋಲು ಖಚಿತ ಎಂದು ಹೇಳಿದರು.

ಭಾಜಪ ಮಂಡಿಸಿದ ವಿಡಿಯೋದಲ್ಲಿ ನೆಹರು ಅವರೇ ವಿಭಜನೆಗೆ ಜವಾಬ್ದಾರರೆಂದು ಉಲ್ಲೇಖ

ಕೇಂದ್ರ ಸರಕಾರ ಕಳೆದ ವರ್ಷದಿಂದ ಆಗಸ್ಟ್ ೧೪ ರಂದು ‘ವಿಭಜನೆಯ ಸ್ಮೃತಿ ದಿನ’ವೆಂದು ಆಚರಿಸುವಂತೆ ಘೋಷಣೆ ನೀಡಿತ್ತು. ಅದರ ಪ್ರಕಾರ ಈ ವರ್ಷ ರಾಜ್ಯದ ಭಾಜಪ ಒಂದು ವಿಡಿಯೋ ಪ್ರಸಾರ ಮಾಡಿದೆ. ೭ ನಿಮಿಷದ ಈ ವಿಡಿಯೋದಲ್ಲಿ ‘ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ನಿರ್ಮಾಣದ ಹಿಂದೆ ನೆಹರು ಅವರ ಕೈವಾಡವಿತ್ತು; ಏಕೆಂದರೆ ಮಹಮ್ಮದ್ ಅಲಿ ಜಿನ್ನಾ ಇವರು ‘ಮುಸ್ಲಿಂ ಲೀಗ್’ ಪಕ್ಷದ ಪಾಕಿಸ್ತಾನ ನಿರ್ಮಾಣದ ಬೇಡಿಕೆಯ ಮುಂದೆ ನೆಹರು ಅವರಿಗೆ ಹಿಂದೆ ಸರಿಯಬೇಕಾಯಿತು’, ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಭಾಜಪ ಸರಕಾರ ಏನು ತಪ್ಪು ಮಾಡಿದೆ ? ಸ್ವಾತಂತ್ರ್ಯವೀರ ಸಾವರಕರ ಇವರನ್ನು ಕಾಂಗ್ರೆಸ್ ಇಲ್ಲಿಯವರೆಗೆ ಬಹಿಷ್ಕರಿಸಿದ್ದರು. ಅದರ ವಿಷಯವಾಗಿ ಕಾಂಗ್ರೆಸ್ಸಿಗರು ಏಕೆ ಮಾತನಾಡುವುದಿಲ್ಲ ? ಈಗ ಯಾರಾದರೂ ಸಾವರಕರ ಇವರಿಗೆ ನ್ಯಾಯ ನೀಡುತ್ತಿದ್ದರೆ, ಅದು ರಾಷ್ಟ್ರಾಭಿಮಾನಿಗಳಿಗಾಗಿ ಅಭಿಮಾನದ ವಿಷಯವೇ ಆಗಿದೆ !