ಖಲಿಸ್ತಾನಿ ಭಯೋತ್ಪಾದಕ ಪನ್ನು ಇವರ ಮನೆಯ ಮೇಲೆ ಪಂಜಾಬ ಜನರು ರಾಷ್ಟ್ರಧ್ವಜ ಹಾರಿಸಿದರು

ಖಲಿಸ್ತಾನಿ ಭಯೋತ್ಪಾದಕ ಪನ್ನು ಇವರ ಮನೆಯ ಮೇಲೆ ಪಂಜಾಬ ಜನರು ರಾಷ್ಟ್ರಧ್ವಜ ಹಾರಿಸಿದರು

ಚಂಡಿಗಡ್ – ಪಾಕಿಸ್ತಾನದ ‘ಐ.ಎಸ್.ಐ.’ ಈ ಗುಪ್ತಚರ ಸಂಸ್ಥೆಯ ಸಹಾಯದಿಂದ ‘ಸಿಖ್ ಫಾರ್ ಜಸ್ಟಿಸ್’ನ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಈ ಖಲಿಸ್ತಾನಿ ಪ್ರತ್ಯೇಕತಾವಾದ ಪುನರುಜ್ಜೀವಿತ ಮಾಡುವ ಪ್ರಯತ್ನದಲ್ಲಿದ್ದಾನೆ. ಅವನು ಸಿಖ್ ಯುವಕರಿಗೆ ಖಲಿಸ್ತಾನಿ ಬಾವುಟ ಹಾರಿಸಲು ಪ್ರಚೋದಿಸುತ್ತಿದ್ದನು; ಆದರೆ ಪಂಜಾಬನ ಜನರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪನ್ನು ಇವರ ಪಂಜಾಬನ ಅಮೃತಸರದಲ್ಲಿನ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಪನ್ನು

ಪನ್ನು ಇವನ ದೇಶವಿರೋಧಿ ಚಟುವಟಿಕೆಯಿಂದಾಗಿ ಭಾರತ ಸರಕಾರ ೨೦೧೯ ರಲ್ಲಿ ಅವನ ‘ಸಿಖ್ ಫಾರ್ ಜಸ್ಟಿಸ್’ ಈ ಸಂಘಟನೆಯನ್ನು ನಿಷೇಧಿಸಿದೆ. ಭಾರತಕ್ಕೆ ಬೇಕಿರುವ ಭಯೋತ್ಪಾದಕರ ಪಟ್ಟಿಯಲ್ಲಿ ಪನ್ನುನ ಸಮಾವೇಶವಿದೆ. ಕೆಲವು ದಿನಗಳ ಮೊದಲು ಪನ್ನು ಪಂಜಾಬದ ಮುಖ್ಯಮಂತ್ರಿ ಭಗವಂತ ಮಾನ ಇವರಿಗೆ ಬೆದರಿಕೆ ನೀಡುವ ವಿಡಿಯೋ ಪ್ರಸಾರ ಮಾಡಿದ್ದನು ಹಾಗೂ ಅವನು ಖಲಿಸ್ತಾನಿ ಬಾವುಟ ಹಾರಿಸುವವರಿಗೆ ಬಹುಮಾನ ಘೋಷಿಸಿದ್ದನು. ಕಳೆದ ವರ್ಷ ಸ್ವಾತಂತ್ರ್ಯ ದಿನದ ಮೊದಲು ಪ್ರಸಿದ್ಧಗೊಳಿಸಿರುವ ಒಂದು ವಿಡಿಯೋದಲ್ಲಿ ಪನ್ನು ಇವನು ‘ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ ಠಾಕೂರ ಇವರಿಗೆ ಆಗಸ್ಟ್ ೧೫ ರಂದು ರಾಷ್ಟ್ರಧ್ವಜ ಹಾರಿಸಲು ಬಿಡುವುದಿಲ್ಲ’, ಎಂಬ ಬೆದರಿಕೆ ನೀಡಿದ್ದನು. ಈ ವಿಡಿಯೋದ ಸಂದೇಶದಲ್ಲಿ, ಹಿಮಾಚಲದ ಕೆಲವು ಭಾಗ ಮೊದಲು ಪಂಜಾಬನ ಭಾಗವಾಗಿದ್ದರಿಂದ ಪಂಜಾಬ ನಂತರ ಅವನು ಹಿಮಾಚಲ ಪ್ರದೇಶವನ್ನೂ ವಶಕ್ಕೆ ಪಡೆಯುವೆನು ಎಂದು ಹೇಳಿದ್ದನು. ಈ ಪ್ರಕರಣದಲ್ಲಿ ಅವನ ವಿರುದ್ಧ ದೇಶದ್ರೋಹದ ಆರೋಪ ದಾಖಲಿಸಲಾಗಿದೆ.

ಮೆ ೨೦೨೨ ರಲ್ಲಿ ಪನ್ನು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕನ ಶಿಕ್ಷೆಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದನು. ಯಾಸಿನ ಮಲಿಕ ಇವನು ‘ಗೌರವಾನ್ವಿತ ನಾಯಕ’ನೆಂದು ಉಲ್ಲೇಖಿಸಿ ಅವನು ಮುಸಲ್ಮಾನರಿಗೆ ಅವರ ಶಿಕ್ಷೆಯನ್ನು ಖಂಡಿಸಿ ಅಮರನಾಥ ಯಾತ್ರೆ ತಡೆಯಲು ಆಹ್ವಾನಿಸಿದ್ದನು.

ಯಾರು ಇವನು ಗುರುಪತವಂತ ಸಿಂಹ ಪನ್ನು ?

ಪಂಜಾಬನ ಅಮೃತಸರದ ಖಾನಕೋಟ ಗ್ರಾಮದ ಗುರುಪತವಂತ ಸಿಂಹ ಪನ್ನು ಇವನ ಪಿತ್ರಾರ್ಜಿತ ಮನೆ ಇದೆ. ಪನ್ನು ಇದೇ ಗ್ರಾಮದಲ್ಲಿ ಜನಿಸಿದವನು. ನಂತರ ಅವನು ವಿದೇಶಕ್ಕೆ ಹೋದನು. ಪನ್ನುನ ತಂದೆ ಮಹೀಂದ್ರ ಸಿಂಹ ಇವರು ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಖಾನಕೋಟೆಗೆ ಬಂದಿದ್ದರು. ಪನ್ನು ಇವನ ಸಹೋದರ ಮಂಗವಂತ ಸಿಂಹ ಇವನ ಜೊತೆಗೆ ವಿದೇಶದಲ್ಲಿ ವಾಸಿಸುತ್ತಿದ್ದನು. ನಂತರ ಅವನು ಅಮೆರಿಕಕ್ಕೆ ಹೋದನು. ಅಲ್ಲಿ ಅವನು ‘ಸಿಖ್ ಫಾರ್ ಜಸ್ಟಿಸ’ ಈ ಹೆಸರಿನ ಪ್ರತ್ಯೇಕತಾವಾದಿ ಖಲಿಸ್ಥಾನಿ ಸಂಘಟನೆ ಸ್ಥಾಪಿಸಿದನು. ಈ ಮೂಲಕ ಅವನು ಭಾರತದ ಯುವಕರಿಗೆ ಖಲಿಸ್ಥಾನಿಗಾಗಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಭಯೋತ್ಪಾದಕರ ವಿರೋಧದಲ್ಲಿ ರಾಷ್ಟ್ರ ಪ್ರೇಮಿ ನಾಗರೀಕರು ಇದೇ ರೀತಿ ಒಗ್ಗಟ್ಟು ತೋರಿಸಿದರೆ ಆಗ ಭಾರತದ ಒಗ್ಗಟ್ಟಿನ ಬಗ್ಗೆ ಸವಾಲೆತ್ತಲು ಯಾರಿಗೂ ಧೈರ್ಯ ಬರುವುದಿಲ್ಲ !