|
ಹರದೋಯಿ (ಉತ್ತರಪ್ರದೇಶ) – ಜಿಲ್ಲೆಯ ಪಾಲಿ ಪ್ರದೇಶದ ಇಮಾಮ ಚೌಕ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಒಬ್ಬ ಹಿಂದೂ ಯುವಕನು ಅಲ್ಲಿಂದ ಹೋಗುವ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದನು. ಅದರಿಂದ ಸ್ಥಳೀಯ ಮುಸಲ್ಮಾನರು ಸಂತಪ್ತರಾದರು. ಅವರು ಆ ಯುವಕನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು, ಹಾಗೂ ಅವರ ಮನೆಯ ಒಬ್ಬ ಯುವತಿಯನ್ನು ಚುಡಾಯಿಸಿದರು. ಮನೆಯಲ್ಲಿನ ಮಹಿಳೆಯು ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಗೆ ಬಂದೂಕು ತೋರಿಸಿ ಕೊಲ್ಲುವುದಾಗಿ ಬೆದರಿಸಿದರು.
೧. ಈ ಸಮಯದಲ್ಲಿ ಅನ್ಯ ಮುಸಲ್ಮಾನರು ಕೂಡ ಘಟನ ಸ್ಥಳಕ್ಕೆ ತಲುಪಿದರು. ನಮ್ಮ ಹಬ್ಬದ ಸಮಯದಲ್ಲಿ ನೀವು ರಾಷ್ಟ್ರಧ್ವಜದ ಮೆರವಣಿಗೆ ಹೇಗೆ ನಡೆಸಿದಿರಿ ? ಎಂದು ಬೆದರಿಸಿದರು.
೨. ಪೊಲೀಸರು ಘಟನೆಯ ಮಾಹಿತಿ ದೊರೆಯುತ್ತಲೆ ಎಲ್ಲರೂ ಘಟನಾ ಸ್ಥಳದಿಂದ ಪರಾರಿಯಾದರು
हरदोई में तिरंगा यात्रा निकालने से कुछ मुस्लिम युवक भड़क गए। इन्होंने घर में घुसकर मारपीट की। इसके बाद दोनों तरफ से पत्थर चलने लगे..!#TirangaYatra #HarGharTiranga https://t.co/AaLskPPfr8
— Hindustan (@Live_Hindustan) August 10, 2022
ಬಂದೂಕು ತೋರಿಸಿ ಫಾರೂಕ್ ನಿಂದ ರಾಷ್ಟ್ರಧ್ವಜಮೆರವಣಿಗೆಗೆ ವಿರೋಧಮುಸಲ್ಮಾನ ಬಹುಸಂಖ್ಯಾತರಿರುವ ಇಮಾಮ ಚೌಕ್ ಪ್ರದೇಶದಿಂದ ರಾಷ್ಟ್ರಧ್ವಜ ಮೆರವಣಿಗೆ ನಡೆಯಬಾರದೆಂದು ಫಾರೂಕ್ ಎಂಬ ಯುವಕನು ಎರಡು ಕೈಯಲ್ಲಿ ಬಂದೂಕು ಹಿಡಿದು ರಾಷ್ಟ್ರಧ್ವಜ ಮೆರವಣಿಗೆಯ ಮಾರ್ಗದಲ್ಲಿ ಅದನ್ನು ತೋರಿಸುತ್ತಾ ತಿರುಗುತ್ತಿದ್ದನು. ಅವನು ಜನರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದನು, ಎಂಬ ಮಾಹಿತಿಯನ್ನು ‘ಝೀ ಹಿಂದುಸ್ತಾನ್ ಹಿಂದಿ ಸಮಾಚಾರ ವಾಹಿನಿ’ಯು ನೀಡಿದೆ. |
ಸಂಪಾದಕೀಯ ನಿಲುವುಯೋಗಿ ಆದಿತ್ಯನಾಥರ ಸರಕಾರವು ಈಗ ಸಂಬಂಧಿತ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರಕಿ ೭೫ ವರ್ಷಗಳಾದವು, ಆದರೆ ರಾಷ್ಟ್ರೀಯ ಹಬ್ಬಗಳನ್ನು ವಿರೋಧಿಸುವವರ ಸಂಖ್ಯೆ ಈಗಲೂ ದೊಡ್ಡ ಪ್ರಮಾಣದಲ್ಲಿದೆ ಎಂಬುದು ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ಲಜ್ಜಾಸ್ಪದ. |