ಕಾನ್ಪುರ (ಉತ್ತರಪ್ರದೇಶ) ಇಲ್ಲಿ ಮೊಹರಂನ ಮೆರವಣಿಗೆಯ ನಂತರ ಶ್ರೀ ಹನುಮಂತನ ಮೂರ್ತಿ ಧ್ವಂಸಗೈದ ಮತಾಂಧರು

ನವದೆಹಲಿ – ದೇಶದಲ್ಲಿ ಇತ್ತೀಚೆಗಷ್ಟೇ ಮೊಹರಂ ಆಚರಿಸಲಾಯಿತು. ಆ ಸಮಯದಲ್ಲಿ ಮುಸಲ್ಮಾನರಿಂದ ಧಾರ್ಮಿಕ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯ ಸಮಯದಲ್ಲಿ ಉತ್ತರಪ್ರದೇಶ ಬಿಹಾರ ಮತ್ತು ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಅವರಿಂದ ಹಿಂಸಾಚಾರ ನಡೆಯಿತು. ಕಾನಪುರದ ಯಶೋದಾನಗರದ ರಸ್ತೆಗೆ ತಗಲಿಕೊಂಡಿರುವ ದೇವಸ್ಥಾನದಲ್ಲಿನ ಶ್ರೀ ಹನುಮಂತನ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು ಹಾಗೂ ಅನೇಕ ಸ್ಥಳಗಳಲ್ಲಿ ಹಿಂದೂಗಳ ಅಂಗಡಿಗಳನ್ನು ದೋಚಲಾಯಿತು. ಈ ಮಾಹಿತಿ ಸಿಗುತ್ತಲೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಒಗ್ಗೂಡಿದರು. ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆಗಳಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ.