ಅಟಾರಿ ಗಡಿಯಲ್ಲಿ ಭಾರತದ ಎಲ್ಲಕ್ಕಿಂತ ಎತ್ತರದ ರಾಷ್ಟ್ರಧ್ವಜದ ಜಾಗದಲ್ಲಿ ಖಲಿಸ್ತಾನಿಗಳಿಂದ ಖಲಿಸ್ತಾನದ ಧ್ವಜವನ್ನು ಹಾರಿಸುವ ಸಂಚು

ಅಮೃತಸರ (ಪಂಜಾಬ) – ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಅಟಾರಿಯಲ್ಲಿ ಎಲ್ಲಕ್ಕಿಂತ ಎತ್ತರದ ರಾಷ್ಟ್ರಧ್ವಜದ ಜಾಗದಲ್ಲಿ ಖಲಿಸ್ತಾನದ ಧ್ವಜವನ್ನು ಹಾರಿಸುವ ಸಂಚನ್ನು ‘ಸಿಖ್ಖ ಫಾರ್‌ ಜಸ್ಟಿಸ್‌’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ರಚಿಸಿದೆ. ಇಲ್ಲಿ ೩೬೦ ಅಡಿ ಎತ್ತರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.

೧. ಈ ಸಂದರ್ಭದಲ್ಲಿನ ಒಂದು ವಿಡಿಯೋ ಸಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ. ಇದರಲ್ಲಿ ಬುರಖಾ ಧರಿಸಿರುವ ಓರ್ವ ಮಹಿಳೆಯು ಕಾಣಿಸುತ್ತಿದ್ದಾಳೆ. ಅದರಲ್ಲಿ ಆಕೆಯು ‘ಸಿಖ್ಖ ಫಾರ್‌ ಜಸ್ಟಿಸ್‌’ ಸಂಘಟನೆಗೆ ಕಾಶ್ಮೀರದ ಪ್ರತ್ಯೇಕತಾವಾದಿಗಳ ಸಂಪೂರ್ಣ ಬೆಂಬಲವಿದೆ. ಅಟಾರಿಯು ಸಿಖ್ಖರ ಗುರುಗಳ ಭೂಮಿಯಾಗಿದೆ’ ಆದರೆ ಭಾರತವು ಇಲ್ಲಿ ತ್ರಿವರ್ಣಧ್ವಜವನ್ನು ಹಾರಿಸುತ್ತಿದೆ. ಸಿಖ್ಖರ ಭೂಮಿಯ ಮೇಲೆ ಕಳೆದ ೭೫ ವರ್ಷಗಳಿಂದ ಭಾರತವು ನಿಯಂತ್ರಣವನ್ನು ಸಾಧಿಸಿದೆ. ಅಟಾರಿ ಗಡಿಯಲ್ಲಿ ತ್ರಿವರ್ಣಧ್ವಜದ ಜಾಗದಲ್ಲಿ ಖಲಿಸ್ತಾನದ ಧ್ವಜವನ್ನು ಹಾರಿಸುವುದೇ ನಮ್ಮ ಉದ್ದೇಶವಾಗಿದೆ. ಇದು ನಿರ್ಣಾಯಕವಾಗಿದೆ. ನಾವು ಕಾಶ್ಮೀರಿ ಮುಜಾಹಿದ್ದೀನ (ಜಿಹಾದಿಗಾಗಿ ಹೋರಾಡುವ) ಖಲಿಸ್ತಾನದ ಯುದ್ಧದಲ್ಲಿ ಸಿಖ್ಖ ಬಂಧು-ಭಗಿನಿಯರೊಂದಿಗೆ ಇದ್ದೇವೆ. ಅಲ್ಲಾಹು ಅಕಬರ (ಅಲ್ಲಾ ಮಹಾನನಿದ್ದಾನೆ)’ ಎಂದು ಹೇಳಿದ್ದಾಳೆ.

೨. ಈ ವಿಡಿಯೋದಲ್ಲಿ ಜನವರಿ ೨೬, ೨೦೨೧ರಲ್ಲಿ ಕೆಂಪು ಕೋಟೆಯ ಮೇಲೆ ತ್ರಿವರ್ಣಧ್ವಜವನ್ನು ತೆಗೆದು ಸಿಖ್ಖ ರೈತರು ಹಳದಿ ಧ್ವಜವನ್ನು ಹಾರಿಸಿರುವುದನ್ನು ತೋರಿಸಲಾಗಿದೆ. ಇದರೊಂದಿಗೆ ಇನ್ನೊಂದು ಪ್ರಸಂಗದಲ್ಲಿ ತ್ರಿವರ್ಣಧ್ವಜದ ಮೇಲೆ ಗುಂಡು ಹಾರಿಸಿರುವುದನ್ನು ತೋರಿಸಲಾಗಿದೆ.

೩. ತನಿಖಾ ಇಲಾಖೆಯು ಈ ವಿಡಿಯೋದ ಬಗ್ಗೆ ತನಿಖೆ ನಡೆಸುತ್ತಿದೆ. ಈ ಮಹಿಳೆಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಖಲಿಸ್ತಾನವಾದಿಗಳಿಂದ ಹೆಚ್ಚುತ್ತಿರುವ ಅಪಾಯವನ್ನು ನೋಡಿ ಅವರ ವಿರುದ್ಧ ಸರಕಾರವು ಕಠೋರ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ !