ಆಝಮಗಡ (ಉತ್ತರಪ್ರದೇಶ)ದಿಂದ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ

  • ಸ್ವಾತಂತ್ರ್ಯ ದಿನದಂದು ರಕ್ತಪಾತ ನಡೆಸಲು ಸಂಚು ಬಹಿರಂಗ

  • ಬಂಧಿಸಿರುವ ಭಯೋತ್ಪಾದಕ ಸಭಾಉದ್ದೀನ್ ಆಝಾಮಿ ಇವನು ‘ಎಂ.ಐ.ಎಂ’ನ ಸಕ್ರಿಯ ಸದಸ್ಯ

ಆಝಮಗಡ್ (ಉತ್ತರಪ್ರದೇಶ) – ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಬಾಉದ್ದೀನ್ ಆಝಮಿಯನ್ನು ಉಗ್ರ ನಿಗ್ರಹ ದಳವು (‘ಎ.ಟಿ.ಎಸ್’ವು) ಬಂಧಿಸಿದೆ. ಸಬಾಉದ್ದೀನ್ ಆಝಮಿ ‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಭರ್ತಿ ಮಾಡುವ ಭಯೋತ್ಪಾದಕ ಅಬು ಉಮರ್‌ನ ಜೊತೆ ನೇರ ಸಂಪರ್ಕದಲ್ಲಿ ಇದ್ದನು ಎಂದು ‘ಎ.ಟಿ.ಎಸ್.’ನ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವನ ಮೂಲಕ ಆತ ಭಯೋತ್ಪಾದಕ ಅಬೂ ಬಕರ್ ಅಲ ಶಾಮಿ ಇವನ ಸಂಪರ್ಕಕ್ಕೆ ಬಂದನು ಮತ್ತು ಆತ ‘ಹ್ಯಾಂಡ್ ಗ್ರೆನೆಡ್, ಬಾಂಬ್ ಮುಂತಾದವು ತಯಾರಿಸುವ ಪ್ರಶಿಕ್ಷಣ ಪಡೆದನು. ಸಬಾಉದ್ದೀನ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರನ್ನು ಗುರಿ ಮಾಡುವುದಕ್ಕಾಗಿ ಫೇಸ್‌ಬುಕ್ ಖಾತೆ ಸಿದ್ಧಪಡಿಸಿದ್ದನು. ಸ್ವಾತಂತ್ರ್ಯ ದಿನದಂದು ರಕ್ತಪಾತ ನಡೆಸಲು ಸಂಚು ರೂಪಿಸಿದ್ದನು.

ಸಬಾಉದ್ದೀನ್ ಆಝಮಿ ಇವನು ಟೆಲಿಗ್ರಾಂ ಸಾಮಾಜಿಕ ಜಾಲತಾಣಗಳ ಮೂಲಕ ‘ಅಲ್ ಶಕರ್ ಮೀಡಿಯಾ’ದ ಮೂಲಕ ಮುಸಲ್ಮಾನ ಯುವಕರ ಬ್ರೈನ್‌ವಾಷ್ ಮಾಡುತ್ತಿದ್ದನು. ಸಬಾಉದ್ದೀನ್ ಇವನು ಸಂಸದ ಅಸದುದ್ದಿನ ಓವೈಸಿ ಇವರ ‘ಎಂ.ಐ.ಎಂ.’ ಪಕ್ಷದ ಸಕ್ರಿಯ ಸದಸ್ಯನಾಗಿದ್ದಾನೆ. ಸಬಾಉದ್ದಿನ್ ಮನೆಯಲ್ಲಿದ್ದು ನೆಗೆಯ ಕೆಲಸ ಮಾಡುತ್ತಿದ್ದನು. ೫ ವರ್ಷಗಳ ಹಿಂದೆ ಅವನು ಮುಂಬಯಿಗೆ ಹೋಗಿದ್ದನು. ಭಾರತದಲ್ಲಿ ‘ಇಸ್ಲಾಮಿಕ್ ಸ್ಟೇಟ್’ ನಂತಹ ಸಂಘಟನೆ ಸಿದ್ಧಪಡಿಸುವ ಯೋಜನೆಯಾಗಿತ್ತು. ಅವನು ಸ್ಪೋಟಕ ತಯಾರಿಸುವ ಪದ್ಧತಿಯನ್ನು ಕಲಿತಿದ್ದನು.
ಉಗ್ರ ನಿಗ್ರಹ ದಳವು ೩ ಭಯೋತ್ಪಾದಕರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಸಬಾಉದ್ದೀನ್ ಜೊತೆ ಅಬು ಹೋಮೈದ ಮತ್ತು ಅಯನ ಇವರು ಸೇರಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ, ಎಂಬ ವರ್ತೆಯನ್ನು ‘ಅಮರ ಉಜಾಲ’ ಪ್ರಸಾರ ಮಾಡಿದೆ.

ಸಂಪಾದಕೀಯ ನಿಲುವು

ದೇಶಕ್ಕೆ ಮಾರಕವಾಗಿರುವ ಇಂತಹ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಬಂದಿತ ಭಯೋತ್ಪಾದಕ ‘ಎಂ.ಐ.ಎಂ. ನ ಸಕ್ರಿಯ ಸದಸ್ಯನಾಗಿದ್ದರೆ ಇಂತಹ ಪಕ್ಷದ ಮೇಲೆ ಸರಕಾರ ನಿಷೇಧಿಸಬೇಕು !