ಜಿಲ್ಲೆ ಅಲ್ಲ, ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನಿಗದಿಯಾಗಬೇಕು ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಧಾರ್ಮಿಕ ಅಥವಾ ಭಾಷೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಜಿಲ್ಲಾ ಮಟ್ಟದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅದು ರಾಜ್ಯಮಟ್ಟದಲ್ಲಿ ಆಗಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ದೇಶದ ೯ ರಾಜ್ಯಗಳ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಅರ್ಜಿಯ ಕುರಿತು ವಿಚಾರಣೆ ಮಾಡುವಾಗ ಹೇಳಿದರು. ದೇವಕಿನಂದನ ಠಾಕೂರ ಇವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ಈ ಬಗ್ಗೆ ಸಪ್ಟೆಂಬರ್ ತಿಂಗಳಿನಲ್ಲಿ ಮುಂದಿನ ವಿಚಾರಣೆ ನಡೆಯುವುದು.

೧೯೯೩ ರಲ್ಲಿ ಕೇಂದ್ರ ಸರಕಾರ ಒಂದು ಅಧಿಸೂಚನೆಯನ್ನು ಜಾರಿ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಮುಸಲ್ಮಾನ, ಸಿಖ್ಕ, ಜೈನ, ಬೌದ್ಧ ಮತ್ತು ಪಾರಸಿ ಇವರನ್ನು ಅಲ್ಪಸಂಖ್ಯಾತರೆಂದು ಘೋಷಿಸಿತ್ತು. ಇವರೆಲ್ಲರಿಗೂ ಜಿಲ್ಲಾ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಸಿರ್ಧರಿಸುವಂತೆ ಠಾಕೂರ್ ಇವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ದೇಶದ ೯ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !