ಈಗ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿದಿಲ್ಲ ! – ಹಿರಿಯ ನ್ಯಾಯವಾದಿ ಕಪಿಲ ಸಿಬ್ಬಲ

ಹಿರಿಯ ನ್ಯಾಯವಾದಿ ಕಪಿಲ ಸಿಬ್ಬಲ

ನವದೆಹಲಿ – ಯಾವ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಆಯ್ಕೆ-ರಾಜಿ ಪ್ರಕ್ರಿಯೆ ಮೂಲಕ ನಡೆಯುತ್ತದೆ, ಅಂತಹ ನ್ಯಾಯಾಲಯ ಎಂದಿಗೂ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಯಾವುದೇ ವಿಭಾಗೀಯ ಪೀಠದ ಎದುರು ಪ್ರಕರಣಗಳ ವಿಚಾರಣೆ ನಡೆಯುವುದು ಇದು ನಿರ್ಧಾರಿತ ಪ್ರಕ್ರಿಯೆಯಲ್ಲ. ಮುಖ್ಯ ನ್ಯಾಯಾಧೀಶರು ಈ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ಒಟ್ಟೂ ೫೦ ವರ್ಷ ನ್ಯಾಯವಾದಿಯಾಗಿ ಕೆಲಸ ಮಾಡಿದ್ದೇನೆ. ಆದರೂ ನ್ಯಾಯ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ ಎಂಬ ಹೇಳಿಕೆಯನ್ನು ರಾಜ್ಯಸಭೆಯ ಸಂಸದರು ಮತ್ತು ಹಿರಿಯ ನ್ಯಾಯವಾದಿಗಳಾದ ಕಪಿಲ ಸಿಬ್ಬಲರವರು ನೀಡಿದ್ದಾರೆ. ಅವರು ಇಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅವರು ಮುಂದುವರಿದು, ಸರ್ವೋಚ್ಚ ನ್ಯಾಯಾಲಯವು ಈವರೆಗೆ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದೆ, ಆದರೆ ವಾಸ್ತವದಲ್ಲಿ ಅದರಿಂದ ಸ್ವಲ್ಪ ಮಟ್ಟಿಗೂ ಬದಲಾವಣೆಯಾಗಿರುವುದು ಕಂಡುಬಂದಿಲ್ಲ. ಕಲಂ ೩೭೭ ತೆರೆವು ಗೊಳಿಸಿದ ನಂತರವೂ ಪ್ರತ್ಯಕ್ಷದಲ್ಲಿ ಏನಾದರೂ ಬದಲಾವಣೆಯಾಗಿರುವುದು ಕಂಡು ಬಂದಿಲ್ಲ. ನಾವು ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದಾಗಲೇ ಮತ್ತು ಅದರ ಬೇಡಿಕೆಯನ್ನಿಟ್ಟಾಗಲೇ ಅದು ಸಾಧ್ಯ, ಎಂದು ಹೇಳಿದರು.