ಭಾರತೀಯ ಪೌರತ್ವ ಸ್ವೀಕರಿಸಿರುವ ಪಾಕಿಸ್ತಾನಿ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ‘ಪ್ರಾಕ್ಟೀಸ್’ ಮಾಡಲು ಅನುಮತಿ

ನವ ದೆಹಲಿ – ಭಾರತದ ‘ನ್ಯಾಷನಲ್ ಮೆಡಿಕಲ್ ಕಮಿಷನ್’ನಿಂದ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಪಡೆದು ಪೌರತ್ವ ಸ್ವೀಕರಿಸಿರುವ ಹಿಂದೂ, ಸಿಖ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ಭಾರತದಲ್ಲಿ ‘ಪ್ರಾಕ್ಟೀಸ್’ ಮಾಡಲು ಅನುಮತಿ ನೀಡಲಾಗಿದೆ. ಡಿಸೆಂಬರ್ ೩೧, ೨೦೧೪ ರ ವರೆಗೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಅಲ್ಪಸಂಖ್ಯಾತರಿಗೆ ಇದರ ಲಾಭ ದೊರೆಯುವುದು. ಅದಕ್ಕಾಗಿ ಈಗ ‘ನ್ಯಾಷನಲ್ ಮೆಡಿಕಲ್ ಕಮಿಷನ್’ನಿಂದ ಅಲೋಪತಿಯ ‘ಅಭ್ಯಾಸಕ್ಕಾಗಿ’ ಅಗತ್ಯವಿರುವ ಶಾಶ್ವತ ನೋಂದಣಿಗಾಗಿ ಭಾರತೀಯ ಪೌರತ್ವ ಸ್ವೀಕರಿಸಿರುವ ಜನರಿಂದ ಅರ್ಜಿ ಆಹ್ವಾನಿಸಿದೆ.