ಕಾವಿ ಬಟ್ಟೆ, ಕೊರಳಲ್ಲಿ ನಾಗರಹಾವು ಮತ್ತು ಭಗವಾನ್ ಶಿವನ ಜಯಘೋಷ ಮಾಡುತ್ತಾ ಭಿಕ್ಷೆ ಬೇಡುವ ೨ ಮುಸಲ್ಮಾನರ ಬಂಧನ

ಬದಾಯು (ಉತ್ತರಪ್ರದೇಶ) – ಇಲ್ಲಿ ಕಾವಿ ಬಟ್ಟೆ ಧರಿಸಿ, ಕೊರಳಿನಲ್ಲಿ ನಾಗರಹಾವು ಸುತ್ತಿಕೊಂಡು ಭಗವಾನ ಶಿವನ ಜಯಘೋಷ ಮಾಡುತ್ತ ಭಿಕ್ಷೆ ಬೇಡುವ ೨ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪಶು ಪ್ರೇಮಿಗಳು ದೂರು ದಾಖಲಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಯಿಂದ ಇವರಿಬ್ಬರನ್ನು ಬಂಧಿಸಿ ಪೊಲೀಸರ ವಶಕ್ಕೆ ನೀಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿ ಇವರ ಇಬ್ಬರ ಹೆಸರು ಕೇಳಿದಾಗ ಅವರು ಮೊದಲು ಹೇಳಲು ನಿರಾಕರಿಸಿದರು. ನಂತರ ಒತ್ತಡ ಹೇರಿದ ನಂತರ ಅವರು ಅವರ ಹೆಸರು ಆಸ ಮಹಮ್ಮದ್ ಮತ್ತು ಫರ್ಮಾನ್ ಇರುವುದಾಗಿ ಹೇಳಿದರು ಮತ್ತು ಅವರು ನೂರಪೂರ ಇಲ್ಲಿಯ ನಿವಾಸಿ ಇರುವುದಾಗಿ ಹೇಳಿದರು. ಅವರಿಂದ ಎರಡು ನಾಗರಹಾವು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅವರು, ಕಾಡಿನಿಂದ ನಾಗರಹಾವು ಹಿಡಿದು ತರುತ್ತಾರೆ ಮತ್ತು ಅದರ ವಿಷ ತೆಗೆದು ಭಿಕ್ಷೆ ಬೇಡಲು ಉಪಯೋಗಿಸುತ್ತಿದ್ದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರ ಈಗ ‘ಭಿಕ್ಷೆ ಜಿಹಾದ್’ !