‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷ ಮೌಲಾನಾ ಬದರುದ್ದೀನ ಅಜಮಲ್ ಇವರ ಹೇಳಿಕೆ !
ಗೌಹಾಟಿ (ಆಸ್ಸಾಂ) – ಒಂದು ವೇಳೆ ಮದರಸಾದಲ್ಲಿ ದುಷ್ಟ ಕೃತ್ಯಗಳನ್ನು ಮಾಡುವ ಜನರು ಸಿಗುತ್ತಿದ್ದರೆ, ನಮಗೆ ಅವರ ವಿಷಯದಲ್ಲಿ ಸ್ವಲ್ಪವೂ ಸಹಾನುಭೂತಿಯಿಲ್ಲ. ಸರಕಾರವು ಇಂತಹವರ ಮೇಲೆ ಗುಂಡು ಹಾಕಬೇಕು, ಎಂದು ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷರಾದ ಮೌಲಾನಾ ಬದರುದ್ಧೀನ ಅಜಮಲ ಇವರು ಹೇಳಿದರು.
‘कुछ लोगों की वजह से पूरी मुस्लिम कौम को न करें बदनाम’, बोले AIUDF चीफ बदरुद्दीन#AIUDF | #BadaruddinAjmalhttps://t.co/1Izt4g8a8J
— TV9 Bharatvarsh (@TV9Bharatvarsh) August 6, 2022
ಅಜಮಲ್ ತಮ್ಮ ಮಾತನ್ನು ಮುಂದುವರಿಸುತ್ತಾ, ಒಂದು ವೇಳೆ ಮದರಸಾದಲ್ಲಿ ೧-೨ ಕೆಟ್ಟ ಶಿಕ್ಷಕರು ಸಿಗುತ್ತಿದ್ದರೇ, ಸರಕಾರ ಅಂತಹವರ ವಿಚಾರಣೆ ಮಾಡಬೇಕು. ಅದರಲ್ಲಿ ಅವರು ತಪ್ಪಿತಸ್ಥರೆಂದು ಕಂಡು ಬಂದರೆ ಸರಕಾರವು ಅವರ ಮೇಲೆ ಕ್ರಮ ಜರುಗಿಸಬೇಕು; ಆದರೆ ಅವರಿಂದಾಗಿ ಸಂಪೂರ್ಣ ಮುಸಲ್ಮಾನರಿಗೆ ‘ಜಿಹಾದಿ’ ಎಂದು ಹೇಳುವುದು ಸೂಕ್ತವಲ್ಲ. ಇದು ‘ಜಿಹಾದ’ ಅಲ್ಲ, ‘ಉಗ್ರವಾದಿ’ ಆಗಿದೆ. ಸರಕಾರವು ಅದನ್ನು ತಡೆಗಟ್ಟಬೇಕು. ಸರಕಾರ ಭಾರತದ ಗಡಿಯನ್ನು ರಕ್ಷಿಸಬೇಕು. ಗುಪ್ತಚರ ಇಲಾಖೆಯನ್ನು ಸುದೃಢಗೊಳಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|