‘೮ ದಿನಗಳಲ್ಲಿ ಸಂಪೂರ್ಣ ಕುಟುಂಬವನ್ನು ಕೊಲ್ಲುವೆವು’ ! – ಉತ್ತರಪ್ರದೇಶದಲ್ಲಿ ಹಿಂದೂವಿಗೆ ಬೆದರಿಕೆ

ಅಜ್ಞಾತರಿಂದ ಬಾಗಿಲ ಮೇಲೆ ಅಂಟಿಸಲಾಗಿದೆ ಬೆದರಿಕೆಯ ಪತ್ರ

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಬರೆಯಲಿ ಜಿಲ್ಲೆಯ ಸಿರೌಲಿ ಭಾಗದ ಕೇಶವಪುರ ಗ್ರಾಮದ ದಿನೇಶ ಪಂಡಿತ ಇವರ ಮನೆಯ ಹೊರಗೆ ಬೆದರಿಕೆ ಪತ್ರ ಅಂಟಿಸಿರುವುದು ಕಂಡು ಬಂದಿದೆ. ಅದರಲ್ಲಿ ಪಂಡಿತ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಸಲಾಗಿದೆ. ಇದರಿಂದ ಗ್ರಾಮದ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಸೂಚನೆ ಸಿಗುತ್ತಲೇ ಪೊಲೀಸ ಅಧಿಕಾರಿ ಚಮನ ಸಿಂಹ ಚೋಪಡಾ ಇವರು ಪಂಡಿತ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಆರೋಪಿಯನ್ನು ಬಂಧಿಸಲಾಗುವುದು ಎಂದು ಸಹ ಚೋಪಡಾ ಹೇಳಿದ್ದಾರೆ.

ದಿನೇಶ ಪಂಡಿತ ಇವರ ಮನೆಯ ಹೊರಗೆ ಬಾಗಿಲಿನ ಮೇಲೆ ಅಂಟಿಸಿರುವ ಪತ್ರದಲ್ಲಿ, ‘ದಿನೇಶ ಪಂಡಿತ, ನೀನು ಹೀಗೆಯೇ ದಾರಿಗೆ ಬರುವುದಿಲ್ಲ. ಸುಮ್ಮನೆ ಇರದಿದ್ದರೆ, ೮ ದಿನದಲ್ಲಿ ನಿನ್ನ ಕುಟುಂಬವನ್ನು ಕೊಲ್ಲುವೆವು, ನಂತರ ಯಾರು ಬೆಂಬಲಕ್ಕೆ ಬರುವುದಿಲ್ಲ. ಹಿಂದೂಗಳ ಪರ ನಿಲ್ಲುವುದನ್ನು ಬಿಟ್ಟು ಬಿಡು. ನಿನಗಾಗಿ ಒಬ್ಬ ಹಿಂದೂ ಕೂಡ ಮುಂದೆ ಬರಲಾರ. ಇಂದು ಊರಿನ ಒಬ್ಬ ವ್ಯಕ್ತಿಯೂ ನಿನ್ನ ಜೊತೆ ಇರುವುದಿಲ್ಲ. ಏನಾದರೂ ಎಲ್ಲರಿಗೆ ಸಹಾಯ ಮಾಡುತ್ತಾ ಇದ್ದರೆ, ಖಂಡಿತವಾಗಿಯೂ ಸಾಯುವಿ’.

ಸಂಪಾದಕೀಯ ನಿಲುವು

  • ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶದಲ್ಲಿ ಅವರನ್ನು ಕೊಲ್ಲುವ ಬೆದರಿಕೆ ಸಿಗುವುದು ಇದು ಹಿಂದೂಗಳಿಗೆ ನಾಚಿಕೆಗೇಡು !
  • ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಉತ್ತರಪ್ರದೇಶದಲ್ಲಿ ಹಿಂದೂಗಳು ಜೀವ ಕೈಯಲ್ಲೇ ಹಿಡಿಕೊಂಡು ಬದುಕುವುದು ಅಪೇಕ್ಷಿತವಾಗಿಲ್ಲ ! ಸಂಬಂಧಿತ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದು ಆವಶ್ಯಕ !