ಈಜಿಪ್ಟಿನಲ್ಲಿ ೪ ಸಾವಿರ ಐದು ನೂರು ವರುಷಗಳ ಪುರಾತನ ಸೂರ್ಯ ಮಂದಿರ ಪತ್ತೆ !

ಸೂರ್ಯ ದೇವಾಲಯದ ಅವಶೇಷಗಳು

ಕೈರೋ (ಈಜಿಪ್ಟ್) – ಈಜಿಪ್ತಿನ ಪುರಾತತ್ವ ಇಲಾಖೆ ಇಲ್ಲಿಯ ಅಬುಸಿರ ಭಾಗದಲ್ಲಿ ಒಂದು ಪ್ರಾಚೀನ ಸೂರ್ಯ ಮಂದಿರ ಕಂಡು ಹಿಡಿದಿದೆ. ಈ ಮಂದಿರ ಸುಮಾರು ೪,೫೦೦ ವರ್ಷಗಳ ಹಳೆಯದ್ದಾಗಿದೆ ಎಂದು ಹೇಳಲಾಗುತ್ತಿದೆ. ಹಸಿ ಇಟ್ಟಿಗೆಯಿಂದ ಕಟ್ಟಲಾಗಿರುವ ಈ ಮಂದಿರ ಈ ದೇಶದ ೫ ನೇ ಸಾಮ್ರಾಜ್ಯದ ಕಾಲದ್ದು ಎಂದು ಅಂದಾಜಿಸಲಾಗಿದೆ. ಈಜಿಪ್ಟಿನಲ್ಲಿ ಈ ಮೊದಲು ೪ ಸಾವಿರ ೫೦೦ ವರ್ಷಗಳ ಹಿಂದಿನ ಸೂರ್ಯ ಮಂದಿರದ ಅವಶೇಷಗಳು ಪತ್ತೆಯಾಗಿದ್ದವು. ೫ ನೇ ಸಾಮ್ರಾಜ್ಯಕ್ಕೆ ಸೇರಿರುವ ಅನ್ಯ ಮಂದಿರಗಳ ಪೈಕಿ ಇದೂ ಒಂದಿರಬಹುದು ಎಂದು ಸರಕಾರ ಹೇಳಿದೆ. ಇತಿಹಾಸದ ಪುಸ್ತಕಗಳಲ್ಲಿ ಇದರ ಉ.ಲ್ಲೇಖವಿದೆ.