ಜ್ಞಾನ ವಾಪಿ ಪ್ರಕರಣದಲ್ಲಿ ಮುಸ್ಲಿಮರ ಪರ ಹೋರಾಡುವ ನ್ಯಾಯವಾದಿ ಅಭಯನಾಥ ಯಾದವ ನಿಧನ

ವಾರಣಾಸಿ – ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಮರ ಪರ ಹೋರಾಡುವ ನ್ಯಾಯವಾದಿ ಅಭಯನಾಥ ಯಾದವ ಹೃದಯಾಘಾತದಿಂದ ನಿಧನರಾದರು. ಜ್ಞಾನವಾಪಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಭಯನಾಥ ಯಾದವ ಅವರು ನ್ಯಾಯಾಲಯದ ಆಯುಕ್ತರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದರೊಂದಿಗೆ ನೆಲಮಾಳಿಗೆಯ ವೀಡಿಯೋ ಪ್ರಸಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ಜ್ಞಾನವಾಪಿ ಪ್ರಕರಣದಲ್ಲಿ ರಾಖಿ ಸಿಂಗ್ ಅವರ ಮನವಿಯ ಮೇಲೆ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ನ್ಯಾಯವಾದಿ ಅಭಯನಾಥ ಯಾದವ ಅವರು ಮುಸ್ಲಿಮರ ಪರವಾಗಿ ಪ್ರತಿನಿಧಿಸುತ್ತಿದ್ದರು. ಆಯೋಗದ ಕ್ರಿಯಾ ವರದಿ ಬಹಿರಂಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಹೃದಯಾಘಾತವಾದ ನಂತರ ಅವರ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ನ್ಯಾಯವಾದಿ ಮದನಮೋಹನ ಯಾದವ ಮಾಹಿತಿ ನೀಡಿದ್ದಾರೆ.