ಬಾಂಗ್ಲಾದೇಶದ ಹಿಂದೂಗಳ ಜನಸಂಖ್ಯೆಯಲ್ಲಿ ಶೇಕಡಾವಾರು ಇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನಡೆದಿರುವ ಜನಗಣತಿಯ ಪ್ರಕಾರ ದೇಶದಲ್ಲಿ ೮ ಕೋಟಿ ೧೭ ಲಕ್ಷ ಪುರುಷರು, ಹಾಗೂ ೮ ಕೋಟಿ ೩೩ ಲಕ್ಷ ಮಹಿಳೆಯರು ಇರುವುದು ತಿಳಿದು ಬಂದಿದೆ. ಅಂದರೆ ಪುರುಷರಿಗಿಂತಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇನ್ನೊಂದು ಕಡೆ ಹಿಂದೂಗಳ ಶೇಕಡಾವಾರು ಸಂಖ್ಯೆ ೭.೯೫ ಕ್ಕೆ ಇಳಿದಿದೆ. ೨೦೧೧ ರಲ್ಲಿ ಜನಗಣತಿಯ ಪ್ರಕಾರ ಈ ಶೇಕಡಾವಾರು ೮.೫ ರಷ್ಟು ಇತ್ತು. ಪ್ರಸ್ತುತ ಜನಗಣತಿಯಲ್ಲಿ ಬೌದ್ಧರ ಜನಸಂಖ್ಯೆ ಒಟ್ಟು ಶೇಕಡಾ ೦.೬೧ ಕ್ಕೆ, ಮತ್ತು ಕ್ರೈಸ್ತರ ಜನಸಂಖ್ಯೆ ಕೂಡ ಶೇಕಡ ೦.೩೦ ಕ್ಕೆ ಇಳಿದಿದೆ. ಆದರೆ ಮುಸಲ್ಮಾನರ ಜನಸಂಖ್ಯೆ ಶೇಕಡ ೯೧.೪ ಕ್ಕೆ ಏರಿದೆ.
೨೦೧೧ ರಲ್ಲಿ ಬಾಂಗ್ಲಾದೇಶದ ಒಟ್ಟು ಜನಸಂಖ್ಯೆ ೧೪ ಕೋಟಿ ೪೦ ಲಕ್ಷ ಇತ್ತು, ಅದು ೨೦೨೨ ರಲ್ಲಿ ೧೬ ಕೋಟಿ ೫೧ ಲಕ್ಷದಷ್ಟು ಆಗಿದೆ. ಜನಸಂಖ್ಯೆ ಹೆಚ್ಚಳದ ಪ್ರಮಾಣ ೨೦೧೧ ರಲ್ಲಿ ಶೇಕಡಾ ೧.೩೭ ಇತ್ತು. ಅದು ಈಗ ಶೇಕಡಾ ೧.೨೨ ರಷ್ಟು ಕಡಿಮೆ ಆಗಿರುವುದು ಕೂಡ ಈ ಜನಗಣತಿಯದಿಂದ ತಿಳಿದು ಬಂದಿದೆ.

 

ವರ್ಷ ಹಿಂದೂಗಳ ಶೇಕಡಾವಾರು
೧೯೫೧ ೨೨.೦೦
೧೯೬೧ ೧೮.೫೦
೧೯೭೪ ೧೩.೫೦
೧೯೮೧ ೧೨.೧೦
೧೯೯೧ ೧೦.೫೦
೨೦೦೧ ೦೯.೨೦
೨೦೧೧ ೦೮.೫೦
೨೦೨೨ ೦೭.೫೫

ಜನಸಂಖ್ಯೆ ೧೪ ಕೋಟಿ ೪೦ ಲಕ್ಷ ಇತ್ತು, ಅದು ೨೦೨೨ ರಲ್ಲಿ ೧೬ ಕೋಟಿ ೫೧ ಲಕ್ಷದಷ್ಟು ಆಗಿದೆ. ಜನಸಂಖ್ಯೆ ಹೆಚ್ಚಳದ ಪ್ರಮಾಣ ೨೦೧೧ ರಲ್ಲಿ ಶೇಕಡಾ ೧.೩೭ ಇತ್ತು. ಅದು ಈಗ ಶೇಕಡಾ ೧.೨೨ ರಷ್ಟು ಕಡಿಮೆ ಆಗಿರುವುದು ಕೂಡ ಈ ಜನಗಣತಿಯದಿಂದ ತಿಳಿದು ಬಂದಿದೆ.

ಸಂಪಾದಕೀಯ ನಿಲುವು

  • ಭಾರತದಿಂದ ಬೇರ್ಪಟ್ಟಿರುವ ಮುಸಲ್ಮಾನ ಬಾಹುಳ್ಯ ದೇಶಗಳಲ್ಲಿ ಹಿಂದೂಗಳ ಮತ್ತು ಸಿಖ್ಖರ ಸಂಖ್ಯೆ ದಿನೇ ದಿನೇ ಕಡಮೆಯಾಗುತ್ತಿದೆ. ಕಳೆದ ೭೫ ವರ್ಷಗಳಲ್ಲಿ ಈ ವಿಷಯದಲ್ಲಿ ಭಾರತ ಸರಕಾರ ಒಂದು ಬಾರಿಯೂ ಧ್ವನಿಯೆತ್ತಲಿಲ್ಲ ಅಥವಾ ಹಿಂದೂ ಸಂಘಟನೆಗಳು ಕೂಡ ಹಾಗೆ ಮಾಡಲು ಸರಕಾರದ ಮೇಲೆ ಒತ್ತಡ ಹೇರಲಿಲ್ಲ, ಇದು ಭಾರತದ ಹಿಂದೂಗಳಿಗೆ ನಾಚಿಕೆಗೇಡು !
  • ಇಸ್ಲಾಮಿ ದೇಶಗಳಾದ ಅಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಇಂದು ಹಿಂದೂಗಳ ಸ್ಥಿತಿ ಏನಾಗಿದೆಯೋ, ಭವಿಷ್ಯದಲ್ಲಿ ಭಾರತದಲ್ಲಿಯೂ ಹಾಗೆಯೇ ಆದರೆ ಆಶ್ಚರ್ಯವೇನು ಇಲ್ಲ. ಕಾಶ್ಮೀರದಲ್ಲಿ ಮತ್ತು ಬಾಂಗಾಲದ ಕೆಲವು ಜಿಲ್ಲೆಗಳಲ್ಲಿ ಹಿಂದೂಗಳು ಇದನ್ನು ಆಗಲೇ ಅನುಭವಿಸುತ್ತಿದ್ದಾರೆ !