ಅಗ್ನಿಪಥ ಯೋಜನೆಯ ವಿರುದ್ಧ ನಡೆದ ಹಿಂಸಾಚಾರದಲ್ಲಿ ರೈಲ್ವೆಗೆ ೨೬೦ ಕೋಟಿ ರೂಪಾಯ ನಷ್ಟ ! – ರೈಲು ಸಚಿವರು

೨ ಸಾವಿರ ೬೪೨ ಪ್ರತಿಭಟನಾಕಾರರ ಬಂಧನ

ಹೊಸ ದೆಹಲಿ – ಕೇಂದ್ರ ಸರಕಾರವು ಅಗ್ನಿಪಥ ಯೋಜನೆ ಪರಿಚಯಿಸಿದ ನಂತರ, ವಿರೋಧಕರು ನಿರ್ಮಿಸಿದ ವಾತಾವರಣದಿಂದ ಯೋಜನೆಯ ವಿರುದ್ಧ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಯೋಜನೆಗೆ ಬಿಹಾರ ರಾಜ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ವಿರೋಧ ವ್ಯಕ್ತವಾಯಿತು. ಅನೇಕ ರೈಲು ಗಾಡಿಗಳು ಬೆಂಕಿಗೆ ಆಹುತಿಯಾದವು. ಅಗ್ನಿಪಥ ಯೋಜನೆಯ ವಿರುದ್ಧ ಭುಗಿಲೆದ್ದ ಹಿಂಸಾಚಾರದಲ್ಲಿ ರೈಲ್ವೆಗೆ ಒಟ್ಟು ೨೬೦ ಕೋಟಿ ರೂಪಾಯಿಯ ನಷ್ಟ ಉಂಟಾಯಿತು ಎಂಬ ಮಾಹಿತಿ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ ಇವರು ಈಗಷ್ಟೇ ಸಂಸತ್ತಿನಲ್ಲಿ ಒಂದು ಲಿಖಿತ ಪ್ರಶ್ನೆಗೆ ಉತ್ತರಿಸುವಾಗ ನೀಡಿದರು.
ಅಗ್ನಿಪಥ ಯೋಜನೆಯ ವಿರುದ್ಧ ಪ್ರತಿಭಟನೆಗಳಿಂದ ದೇಶದಾದ್ಯಂತ ಒಟ್ಟು ೨ ಸಾವಿರ ೧೩೨ ರೈಲು ಗಡಿಗಳನ್ನು ರದ್ದುಪಡಿಸಲಾಯಿತು. ಈ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದರು ಹಾಗೂ ೩೫ ಜನರು ಗಾಯಗೊಂಡರು. ೨ ಸಾವಿರ ೬೪೨ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಅಶ್ವಿನಿ ವೈಷ್ಣವ ಇವರು ನೀಡಿದರು.

ಸಂಪಾದಕೀಯ ನಿಲುವು

ಹಿಂಸಕ ಆಂದೋಲನ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡುವವರಿಗೆ ಸರಕಾರ ಜೀವಾವಧಿಗಾಗಿ ಕಾರಾಗೃಹಕ್ಕೆ ತಳ್ಳಿ ಅವರಿಂದ ನಷ್ಟ ಪರಿಹಾರ ವಸೂಲಿ ಮಾಡಬೇಕು, ಅದರ ಭಾರ ಜನರ ಮೇಲೆ ಬೀಳದೆ ಇರುವ ಹಾಗೆ ನೋಡಬೇಕು.