ಹೊಸದೆಹಲಿ ರೈಲು ನಿಲ್ದಾಣದ ಕೋಣೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ೪ ಸಿಬ್ಬಂದಿಗಳ ಬಂಧನ

ಇಂತಹ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು !

ಹೊಸ ದೆಹಲಿ – ಸ್ಥಳೀಯ ರೈಲು ನಿಲ್ದಾಣದಲ್ಲಿರುವ ಕೋಣೆಯಲ್ಲಿ ಮಧ್ಯರಾತ್ರಿ ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ೪ ರೈಲ್ವೆ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಅತ್ಯಾಚಾರವೆಸಗಿದ್ದು ಇನ್ನಿಬ್ಬರು ಅವರಿಗೆ ಸಹಾಯ ಮಾಡಿದ್ದಾರೆ. ಸಂತ್ರಸ್ತೆಗೆ ಕೆಲವು ದಿನಗಳ ಹಿಂದೆ ಆರೋಪಿಯ ಪರಿಚಯವಾಗಿತ್ತು. ಅವನು ಆಕೆಗೆ ರೈಲು ನಿಲ್ದಾಣಕ್ಕೆ ಕರೆಸಿಕೊಂಡಿದ್ದನು. ನಿಲ್ದಾಣದಲ್ಲಿ ಮೇಲ್ಸೇತುವೆ ಕೆಳಗೆ ಇರುವ ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ.