ಹೊಸ ದೆಹಲಿ – ಎಲ್ಲೆಡೆ ಬೆಲೆ ಏರಿಕೆ ಹೆಚ್ಚಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಸಂಕಷ್ಟದಲ್ಲಿ ಇವೆ. ಈ ಬೆಲೆ ಏರಿಕೆಯಿಂದ ಜಗತ್ತಿನ ಸರಾಸರಿ ೭ ಕೋಟಿ ಜನರು ಬಡವರಾಗುವರೆಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಎಚ್ಚರಿಕೆ ನೀಡಿದೆ.
೧. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೋರ್ಜೀಯೇವಾ ಇವರು ಹೆಚ್ಚುತ್ತಿರುವ ಬೆಲೆ ಏರಿಕೆ ವಿಷಯ ದ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿದರೆ. ಜಗತ್ತಿನಾದ್ಯಂತ ಬೆಲೆ ಏರಿಕೆ ಇಂದು ಸರ್ವೋಚ್ಚ ಮಟ್ಟಕ್ಕೆ ತಲುಪಿದೆ. ಅದೇ ಸಮಯದಲ್ಲಿ ರಷ್ಯಾ ಮತ್ತು ಯುಕ್ರೇನ್ ಇವರಲ್ಲಿ ನಡೆಯುತ್ತಿರುವ ಯುದ್ಧದಿಂದ ಅದರಲ್ಲಿ ಇನ್ನೂ ಹೆಚ್ಚಳ ಆಗಿದೆ. ಬಹಳಷ್ಟು ಬಡವ ದೇಶಗಳಿಗೆ ಶೇಕಡಾ ೫ ಕಿಂತ ಹೆಚ್ಚಿನ ಬೆಲೆ ಏರಿಕೆ ಎದುರಿಸಬೇಕಾಗಿದೆ. ಬರುವ ಕೆಲವು ದಿನಗಳಲ್ಲಿ ಬೆಲೆ ಏರಿಕೆಯ ಸ್ಥಿತಿ ಇನ್ನು ಹೆಚ್ಚಾಗಬಹುದು. ಆದ್ದರಿಂದ ಅನೇಕ ದೇಶಗಳಲ್ಲಿ ಸಾಮಾಜಿಕ ಮಟ್ಟದಲ್ಲಿ ಅಸ್ಥಿರತೆ ನಿರ್ಮಾಣವಾಗಬಹುದು, ಎಂದು ಭಯವು ವ್ಯಕ್ತಪಡಿಸಿದರು.
೨. ಏಷ್ಯದ ಅಭಿವೃದ್ಧಿ ಬ್ಯಾಂಕಿನಿಂದ ಹೆಚ್ಚುತ್ತಿರುವ ಬೆಲೆ ಏರಿಕೆಯ ಕಾರಣದಿಂದ ಭಾರತದ ವಿಕಾಸ ದರದ ಅಂದಾಜು ಕಡಿಮೆಯಾಗಿದೆ. ಈ ಬ್ಯಾಂಕನಿಂದ ೨೦೨೨ – ೨೦೨೩ ಆರ್ಥಿಕ ವರ್ಷಕ್ಕಾಗಿ ಭಾರತ ವಿಕಾಸದರ ಕಡಿಮೆ ಮಾಡಿ ೭.೫% ಇಡಲಾಗಿದೆ. ಆರ್ಥಿಕ ಇಳಿಕೆಯ ಭೀತಿಯಿಂದ ಪ್ರಸ್ತುತ ಜಗತ್ತಿನಾದ್ಯಂತ ದೊಡ್ಡ ಕಂಪನಿಗಳ ಸಿಬ್ಬಂದಿ ನೇಮಕ ನಿಲ್ಲಿಸಲಾಗಿದೆ.
कोरोना महामारी ने दुनिया भर की अर्थव्यवस्थाओं के लिए मुश्किल हालात पैदा किया, अब दुनिया महंगाई की मार से परेशान है https://t.co/CviNpdTCNq
— AajTak (@aajtak) July 21, 2022
೨೦೨೨ ಇದು ಕಠಿಣ ಹಾಗೂ ೨೦೨೩ ಇನ್ನೂ ಹೆಚ್ಚು ಕಠಿಣವಾಗಿರುವುದು – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ೨೦೨೨ ಇದು ಕಠಿಣ, ಹಾಗೂ ೨೦೨೩ ಇನ್ನೂ ಹೆಚ್ಚು ಕಠಿಣವಾಗಿರುವುದು, ಜನರಿಗೆ ಬೆಲೆ ಏರಿಕೆಯಿಂದ ಬೇಗನೆ ನೆಮ್ಮದಿ ಸಿಗುವುದಿಲ್ಲ, ಈ ರೀತಿ ಹೇಳಿಕೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೋರ್ಜೀಯೇವಾ ಇವರು ಬ್ಲಾಗ ಮೂಲಕ ನೀಡಿದ್ದಾರೆ. |
ಸಂಪಾದಕೀಯ ನಿಲುವುಭವಿಷ್ಯದಲ್ಲಿ ಇದಕ್ಕಿಂತ ಇನ್ನು ದೊಡ್ಡ ಆಪತ್ಕಾಲ ಬರುವುದು ಎಂದು ದಾರ್ಶನಿಕ ಸಂತರು ಈ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇಂತಹ ಭೀಷಣ ಆಪತ್ಕಾಲದಲ್ಲಿ ಬದುಕುಳಿಯಲು ಜನರು ಸಾಧನೆ ಮಾಡುವುದು ಆವಶ್ಯಕ! |