ಜ್ಞಾನವಾಪಿಯ ಶಿವಲಿಂಗದ ಪೂಜೆಗೆ ಅನುವು ಮಾಡಿಕೊಡುವ ಮನವಿಯ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

ಹೊಸ ದೆಹಲಿ – ಜ್ಞಾನವಾಪಿ ಪರಿಸರದಲ್ಲಿ ಸಿಕ್ಕಿರುವ ಶಿವಲಿಂಗದ ಪೂಜೆ ಮಾಡುವ ಅನುಮತಿ ಕೇಳಿರುವುದು ಮತ್ತು ಅದರ ಕಾರ್ಬನ್ ಡೇಟಿಂಗ್ (ಯಾವುದಾದರೂ ವಸ್ತು ಎಷ್ಟು ವರ್ಷ ಹಳೆಯದಾಗಿದೆ ಇದನ್ನು ಪರೀಕ್ಷಿಸುವುದು) ಪರೀಕ್ಷಣೆ ಮಾಡುವ ಅನುಮತಿ ಕೇಳಿರುವ ಹೊಸ ಮನವಿಯ ಮೇಲೆ ಸದ್ಯಕ್ಕೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

೧. ನ್ಯಾಯಾಲಯ ಹೇಳುವುದೇನೆಂದರೆ, ಈ ಪ್ರಕರಣದ ಒಂದು ಮೊಕ್ಕದಮೆ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇದೆ. ವಾರಾಣಸಿ ನ್ಯಾಯಾಲಯದ ಮೊಕ್ಕದಮೆಯ ತೀರ್ಪಿನ ದಾರಿ ನಾವು ಕಾಯುತ್ತಿದ್ದೇವೆ. ಅದರ ವಿಚಾರಣೆ ನಡೆದ ನಂತರ ಮುಂದಿನ ವಿಚಾರಣೆ ಮಾಡಬಹುದು. ಅಲ್ಲಿಯವರೆಗೆ ಈ ಪ್ರಕರಣ ಕಾದಿರಿಸಲಾಗುವುದು. ಅಲ್ಲಿ ಏನಾದರೂ ನಿಮ್ಮ ಪರವಾಗಿ ತೀರ್ಪು ಬಂದರೆ ಆಗ ಪ್ರಕರಣ ಮಾಗಿಯುತ್ತದೆ, ಏನಾದರೂ ವಿರುದ್ಧ ಬಂದರೆ, ಆಗ ಮುಂದೆ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ. ಅಕ್ಟೋಬರ ಮೊದಲನೇ ವಾರದಲ್ಲಿ ಇದರ ಮೇಲೆ ವಿಚಾರಣೆ ನಡೆಯಬಹುದು.

೨. ಸರ್ವೋಚ್ಚ ನ್ಯಾಯಾಲಯವು ಈ ಸಮಯದಲ್ಲಿ ಅರ್ಜಿದಾರರ ನ್ಯಾಯವಾದಿ ಪೂ. ಹರಿ ಶಂಕರ ಜೈನ ಇವರಿಗೆ ‘ನೀವು ತಿಳುವಳಿಕೆ ಇರುವ ನ್ಯಾಯವಾದಿ. ನೀವು ಯಾವ ಮನವಿ ಸಲ್ಲಿಸಿ ಬೇಡಿಕೆ ಮಾಡುತ್ತಿದ್ದೀರೋ, ಅದನ್ನು ಒಡೆತನದ ಅಧಿಕಾರದ ಸಂದರ್ಭದಲ್ಲಿ ವಿಚಾರಣೆಯ ಸಮಯದಲ್ಲಿ ಮಾಡಬಹುದು. ನೀವು ಕಲಂ ೩೨ ಪ್ರಕಾರ ಈ ಬೇಡಿಕೆ ಸಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿತು.