ನೂಂಹ (ಹರಿಯಾಣಾ) ಇಲ್ಲಿ ಡಂಪರನಿಂದ ಉಪ ಪೊಲೀಸ ವರಿಷ್ಠಾಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಶಬ್ಬೀರ ಬಂಧನ

ನೂಂಹ (ಹರಿಯಾಣಾ) – ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಉಪ ಪೊಲೀಸ ವರಿಷ್ಠಾಧಿಕಾರಿ ಸುರೇಂದ್ರ ಸಿಂಗ ಅವರ ಮೇಲೆ ಡಂಪರ ಹಾಯಿಸಿ ಅವರ ಹತ್ಯೆ ಮಾಡಿದ ಪ್ರಕರಣದ ಮುಖ್ಯ ಆರೋಪಿ ಶಬ್ಬೀರನನ್ನು ಪೊಲೀಸರು ರಾಜಸ್ಥಾನದ ಭರತಪುರದಿಂದ ಬಂಧಿಸಿದ್ದಾರೆ. ಬಂಧಿಸುವಾಗ ಅವನು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ನಡೆದ ಗುಂಡಿನ ಚಮಕಿಯಲ್ಲಿ ಅವನಿಗೆ ಗುಂಡು ತಾಗಿ ಗಾಯಗೊಂಡಿದ್ದಾನೆ. ಇದಕ್ಕೂ ಮುನ್ನ ಅವನ ಸಹಚರ ಇಕರಾರನನ್ನು ಬಂಧಿಸಲಾಗಿತ್ತು. ಆತನನ್ನು ಬಂಧಿಸುವಾಗಲೂ ಅವನು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.

ಸಂಪಾದಕೀಯ ನಿಲುವು

ಈಗ ಹರಿಯಾಣಾದಲ್ಲಿ ಬಿಜೆಪಿ ಸರಕಾರವಿರುವುದರಿಂದ ಆರೋಪಿಗಳನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಮತ್ತು ಮರಣದಂಡನೆ ವಿಧಿಸಲು ಪ್ರಯತ್ನಿಸಬೇಕು. ಆಲ್ಲದೇ ರಾಜ್ಯದಲ್ಲಿ ಮತಾಂಧರ ಗಣಿಗಾರಿಕೆ ಮಾಫಿಯಾವನ್ನು ಬೇರು ಸಮೇತ ಕಿತ್ತು ತೆಗೆದು ನಾಶ ಪಡಿಸಬೇಕು !