ಪಂಜಾಬನಲ್ಲಿ ಹೆಚ್ಚುತ್ತಿರುವ ಸಿಖ್ಖರ ಮತಾಂತರ !

  • ಅಮೃತಸರ ಮತ್ತು ಗುರುದಾಸಪುರ ಜಿಲ್ಲೆಗಳಲ್ಲಿ ೭೦೦ ಚರ್ಚಗಳು !

  • ರಾಜ್ಯದ ೧೨ ಸಾವಿರ ಹಳ್ಳಿಗಳ ಪೈಕಿ ೮ ಸಾವಿರ ಗ್ರಾಮಗಳಲ್ಲಿ ಕ್ರೈಸ್ತ ಧಾರ್ಮಿಕ ಸಮಿತಿಗಳು ಕೆಲಸ ಮಾಡುತ್ತಿವೆ !

ಚಂಡಿಗಡ – ಪಂಜಾಬನ ಪಾಕಿಸ್ತಾನದ ಗಡಿಯಲ್ಲಿರುವ ಬಟಾಲಾ, ಗುರುದಾಸಪುರ, ಜಲಂಧರ, ಲುಧಿಯಾನಾ, ಫತೇಹಗಢ ಚುಡಿಯಾ, ಡೇರಾ ಬಾಬಾ ನಾನಕ, ಮಜಿಠಾ, ಅಜನಾಲಾ ಮತ್ತು ಅಮೃತಸರ ಈ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ಖರನ್ನು ಮತಾಂತರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಖ್ಖರ ಧಾರ್ಮಿಕ ಪೀಠವಾದ ಅಕಾಲ ತಖ್ತನ ಜಥ್ತೆದಾರ(ಮುಖ್ಯಸ್ಥ) ಜ್ಞಾನಿ ಹರಪ್ರೀತ ಸಿಂಗ ಇವರು, ಈ ಹಳ್ಳಿಗಳಲ್ಲಿನ ಕ್ರೈಸ್ತ ಮಿಷನರಿಗಳು ಸಿಖ್ಖರನ್ನು ಹಣದ ಆಮಿಷವನ್ನು ತೋರಿಸಿ ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಇದು ಸಿಖ ಧರ್ಮದ ಮೇಲಿನ ದಾಳಿಯಾಗಿದೆ. ಇದನ್ನು ನಾವು ಸಹಿಸುವದಿಲ್ಲ ಎಂದು ಹೇಳಿದ್ದಾರೆ.

೧. ಶಿರೊಮಣಿ ಗುರುದ್ವಾರ ವ್ಯವಸ್ಥಾಪನಾ ಕಮಿಟಿಗೂ ಈ ಕುರಿತು ಹಲವು ದೂರುಗಳು ಬಂದಿದ್ದು ಕಮಿಟಿಯು ಈ ಘಟನೆಗಳನ್ನು ಗಂಭಿರವಾಗಿ ಪರಿಗಣಿಸಿದೆ. ಈ ಕಮಿಟಿಯು ಸಮಿತಿಯನ್ನು ನೇಮಿಸಿ ಗ್ರಾಮದಿಂದ ಗ್ರಾಮಕ್ಕೆ ತೆರಳಿ ಸಿಖ್ಖರಲ್ಲಿ ಜಾಗೃತಿ ಮೂಡಿಸಿದೆ.

೨. ‘ಯುನೈಟೆಡ ಕ್ರಿಶ್ಚಿಯನ ಫ್ರಂಟ’ನ ಅಂಕಿ ಅಂಶಗಳ ಪ್ರಕಾರ ಪಂಜಾಬಿನ ೧೨ ಸಾವಿರ ಹಳ್ಳಿಗಳ ಪೈಕಿ ೮ ಸಾವಿರ ಹಳ್ಳಿಗಳಲ್ಲಿ ಕ್ರೈಸ್ತರು ಧಾರ್ಮಿಕ ಸಮಿತಿಗಳನ್ನು ಸ್ಥಾಪಿಸಿದ್ದಾರೆ. ಅಮೃತಸರ ಮತ್ತು ಗುರುದಾಸಪುರ ಜಿಲ್ಲೆಗಳಲ್ಲಿ ೬೦೦ ರಿಂದ ೮೦೦ ಕ್ರೈಸ್ತರ ಚರ್ಚಗಳಿವೆ. ಇದರಲ್ಲಿ ಶೇ. ೭೦ ರಷ್ಟು ಚರ್ಚಗಳನ್ನು ಕಳೆದ ೫ ವರ್ಷಗಳಲ್ಲಿ ನಿರ್ಮಿಸಲಾಗಿದೆ.

೩. ಕ್ರೈಸ್ತರು ಸಿಖ್ಖರನ್ನು ಮತಾಂತರ ಮಾಡಿದಾಗ ಅವರ ಜೀವನ ಶೈಲಿ ಮತ್ತು ಉಡುಗೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಕ್ಕೆ ಹೇಳುವುದಿಲ್ಲ. ಆದ್ದರಿಂದ ‘ಅವರು ಕ್ರೈಸ್ತರಾದರು’ ಎಂಬುದು ಗಮನಕ್ಕೆ ಬರುವುದಿಲ್ಲ. ಕೊನೆಯ ಅಡ್ಡ ಹೆಸರನ್ನು ಮಾತ್ರ ‘ಮಸಿಹ’ ಪದವು ಸೇರಿಸಲಾಗುತ್ತಿದೆ. ಈ ಮತಾಂತರಗೊಂಡವರಲ್ಲಿ ಬಹುಪಾಲು ದಲಿತರಾಗಿದ್ದಾರೆ; ಆದರೆ ಅಧಿಕೃತವಾಗಿ ಮತಾಂತರಗೊಂಡಿರುವದಾಗಿ ತೋರಿಸಿಕೊಳ್ಳದ ಕಾರಣ ದಲಿತರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗುತ್ತಿವೆ.

ಸಂಪಾದಕೀಯ ನಿಲುವು

‘ಕೆಂದ್ರ ಸರಕಾರ ಮತಾಂತರ ವಿರೋಧಿ ಕಾನೂನನ್ನು ಯಾವಾಗ ಮಾಡುವುದು ?’ ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ನಿರಂತರವಾಗಿ ಉದ್ಭವಿಸುತ್ತದೆ !