ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಇಂತಹ ದರ್ಜೆ ದೊರೆಯದಿರುವುದರ ನಿಖರವಾದ ಪುರಾವೆಗಳನ್ನು ನೀಡಿದ ನಂತರ ಈ ಅರ್ಜಿಯ ಮೇಲೆ ವಿಚಾರ ಮಾಡುತ್ತೇವೆ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಎಲ್ಲ ಪುರಾವೆಗಳನ್ನು ತೋರಿಸಿದರೆ ಹಾಗೂ ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದರೂ ಅವರಿಗೆ ಅಲ್ಪಸಂಖ್ಯಾತರಾಗಿರುವ ದರ್ಜೆ ದೊರೆಯುತ್ತಿಲ್ಲ ಎಂದಾದರೆ, ನಾವು ಈ ಹಿಂದೂಗಳಿಗೆ ಅಲ್ಪಸಂಖ್ಯಾತರಾಗಿರುವ ದರ್ಜೆ ನೀಡುವ ಅರ್ಜಿಯ ಮೇಲೆ ವಿಚಾರ ಮಾಡುತ್ತೇವೆ, ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವುದರ ದರ್ಜೆ ನೀಡಲು ದಾಖಲಿಸಲಾದ ಅರ್ಜಿಯ ಮೇಲೆ ಆಲಿಕೆಯನ್ನು ನಡೆಸುವಾಗ ನ್ಯಾಯಾಲಯವ ಮೇಲಿನ ಅಭಿಪ್ರಾಯವನ್ನು ಮಂಡಿಸಿದೆ. ೧೯೯೩ರ ಕೇಂದ್ರ ಸರಕಾರದ ಸೂಚನೆಯ ಮೂಲಕ ದೇಶದಲ್ಲಿ ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಪಾರಸಿಗಳಿಗೆ ಅಲ್ಪ ಸಂಖ್ಯಾತರೆಂದು ಘೋಷಿಸಲಾಗಿದೆ. ಈ ಸೂಚನೆಯನ್ನು ದೇವಕೀನಂದನ ಠಾಕೂರರವರು ಈ ಅರ್ಜಿಯ ಮೂಲಕ ಪ್ರಶ್ನಿಸಿದ್ದಾರೆ.

೧. ನ್ಯಾಯಾಲಯವು ‘ಒಂದು ಧರ್ಮಕ್ಕೆ ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತವೆಂದು ಘೋಷಿಸಬೇಕು; ಆದರೆ ಎಲ್ಲಿಯ ವರೆಗೆ ಅವರಿಗೆ ಅಲ್ಪಸಂಖ್ಯಾತರ ದರ್ಜೆ ನೀಡಲು ನಿರಾಕರಿಸಲಾಗುವುದಿಲ್ಲ, ಅಲ್ಲಿಯ ವರೆಗೆ ನ್ಯಾಯಾಲಯವೂ ಈ ಬಗ್ಗೆ ವಿಚಾರ ಮಾಡಲಾರದು’ ಎಂದು ಹೇಳಿದೆ.

೨. ಅರ್ಜಿದಾರರ ನ್ಯಾಯವಾದಿಗಳು, ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಲ್ಲ ಎಂಬ ವಿಚಾರ ಸರಣಿ ನಿರ್ಮಾಣವಾಗಿದೆ, ಎಂದು ಹೇಳಿದರು.

೩. ಇದಕ್ಕೆ ನ್ಯಾಯಾಲಯವು ‘ಯಾವ ರಾಜ್ಯವು ಉದಾಹರಣೆಗೆ ಕಾಶ್ಮೀರ, ಮಿಝೋರಾಮ ಇತ್ಯಾದಿ ರಾಜ್ಯಗಳಲ್ಲಿ ಒಂದು ಧರ್ಮಕ್ಕೆ ಅಲ್ಪಸಂಖ್ಯಾತವೆಂದು ಘೋಷಿಸಲು ನಿರಾಕರಿಸಲಾಗುತ್ತಿದೆಯೇ ?, ಎಂದು ಕೇಳಿದರು.

೪. ಇದನ್ನು ಉತ್ತರಿಸಲು ನ್ಯಾಯವಾದಿಗಳು ಒಂದು ವಾರದ ಸಮಯ ಕೇಳಿದ್ದಾರೆ. ಆದುದರಿಂದ ಈ ವಿಷಯದಲ್ಲಿ ೧ ವಾರದ ನಂತರ ಮುಂದಿನ ಆಲಿಕೆ ನಡೆಯಲಿದೆ.

ಸಂಪಾದಕೀಯ ನಿಲುವು

* ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ದರ್ಜೆಯನ್ನು ನೀಡಬೇಕಾಗಿ ಮನವಿ ಮಾಡುವ ಅರ್ಜಿ !