ದೆಹಲಿಯ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಈ ವರ್ಷ ಶೇ. ೬೦ ರಷ್ಟು ಇಳಿಕೆ !

ನವ ದೆಹಲಿ – ಇಲ್ಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಕಳೆದ ವರ್ಷದಲ್ಲಿ ಶೇ. ೬೦ ಕ್ಕೂ ಹೆಚ್ಚಿನ ಇಳಿಕೆ ಆಗಿದೆ, ಎಂದು ಇಲ್ಲಿಯ ೮೪ ವಯಸ್ಸಿನ ದಿವಾಣ ಅಲಿ ಮುಸಾ ನಿಝಾಮಿ ಇವರು ಮಾಹಿತಿ ನೀಡಿದರು.

೧. ದಿವಾಣ ನಿಝಾಮಿ, ಎರಡೂ ಧರ್ಮಗಳಲ್ಲಿ ದ್ವೇಷ ಇನ್ನೂ ಹೆಚ್ಚಾಗಲಿದೆ. ಈ ದ್ವೇಷದಿಂದ ಇಲ್ಲಿ ಬರುವ ಹಿಂದೂಗಳ ಸಂಖ್ಯೆ ಕಡಿಮೆ ಆಗಿದೆ. ಈ ಮೊದಲು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಬರುತ್ತಿದ್ದರು. ಮಧ್ಯಾಹ್ನ ೨ ರಿಂದ ರಾತ್ರಿ ೧೧ ವರೆಗೆ ಹಿಂದುಗಳು ಬರುತ್ತಿದ್ದರು. ಹಿಂದೂಗಳು ಮೊದಲು ಇಲ್ಲಿ ಭಂಡಾರ ನಡೆಸುತ್ತಿದ್ದರು, ಹಾಗೂ ದುಡ್ಡನ್ನು ಹಂಚುತ್ತಿದ್ದರು. ಈಗ ಆ ಸ್ಥಿತಿ ಇಲ್ಲ. ಹಿಂದೂಗಳಲ್ಲಿ ಈಗ, ‘ಅಲ್ಲಿ ಕಬರ ಇದೆ. ಅಲ್ಲಿ ಪ್ರಾರ್ಥನೆ ಮಾಡುವುದರಿಂದ ಏನೂ ಸಿಗುವುದಿಲ್ಲ. ದೇವಸ್ಥಾನಕ್ಕೆ ಹೋಗಿರಿ.’ ಎಂಬ ಪ್ರಚಾರ ಮಾಡಲಾಗುತ್ತಿದೆ. ಹಿಂದುಗಳು ಒಳ್ಳೆಯವರಾಗಿದ್ದಾರೆ; ಆದರೆ ಏನೇಲ್ಲ ಪ್ರಚಾರ ಮಾಡಲಾಗುತ್ತಿದೆ ಅದರಿಂದ ದ್ವೇಷ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

೨. ನಿಝಾಮಿ ಇವರು ನೂಪುರ ಶರ್ಮಾ ಪ್ರಕರಣ ಮತ್ತು ಕನ್ಹಯ್ಯಲಾಲ ಅವರ ಶಿರಚ್ಛೇದದ ಬಗ್ಗೆ ಕೇಳಿದಾಗ ಅವರು, ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಕೆಲವು ಜನರು ಯಾವಾಗಲೂ ಎರಡು ಧರ್ಮದಲ್ಲಿಯೂ ಜನರಿಗೆ ತೊಂದರೆ ನೀಡುತ್ತಿರುತ್ತಾರೆ; ಆದರೆ ದರ್ಗಾ ಶಾಂತಿಯ ಸಂದೇಶ ನೀಡುತ್ತದೆ.

೩. ದರ್ಗಾದ ಹತ್ತಿರವೇ ತಬಲಿಗಿ ಜಮಾತ್ ಕಚೇರಿ ಇದೆ. ಕರೋನಾದ ಸಮಯದಲ್ಲಿ ಅದು ಕುಖ್ಯಾತಿ ಆಗಿತ್ತು. ಈ ವಿಷಯವಾಗಿ ನಿಝಾಮಿ ಇವರಿಗೆ ಕೇಳಿದಾಗ ಅವರು, ಈ ಪ್ರಕರಣದಿಂದ ದರ್ಗಾದಲ್ಲಿ ಹಿಂದೂಗಳು ಬರುವುದು ಕಡಿಮೆ ಆಗಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳಲ್ಲಿ ಈಗ ಜಾಗೃತಿ ಮೂಡಿದ್ದು ಅವರಿಗೆ ಮತಾಂಧಾರ ನಿಜ ಸ್ವರೂಪ ಗಮನಕ್ಕೆ ಬರುತ್ತಿದೆ. ಅದರ ಪರಿಣಾಮವೆಂದು ಹಿಂದೂಗಳು ಅಜಮೆರ ದರ್ಗಾ ಮತ್ತು ಈಗ ನಿಜಾಮುದ್ದಿನ ದರ್ಗಾಗೆ ಹೋಗುವುದು ಕಡಿಮೆ ಮಾಡಿದ್ದಾರೆ. ಮುಂದೆ ಪೂರ್ಣವಾಗಿ ನಿಂತು ಹೋಗುವುದು !