ಧಾರ ಎಂಬಲ್ಲಿ ಎಸ್ ಟಿ ಬಸ್ಸು ನರ್ಮದೆಗೆ ಉರುಳಿ ೧೩ ಜನರ ಸಾವು

ಧಾರ (ಮಧ್ಯ ಪ್ರದೇಶ) : ಇಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ ಮಹಾಮಂಡಳದ ಬಸ್ಸು ಸೇತುವೆಯಿಂದ ನದಿಗೆ ಉರುಳಿದ ಭೀಕರ ಅಪಘಾತದಲ್ಲಿ ೧೩ ಜನರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ೧೫ ಜನರನ್ನು ಉಳಿಸುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಸರಕಾರದಿಂದ ಮೃತಪಟ್ಟವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ. ಈ ಬಸ್ಸಿನಲ್ಲಿ ೫೦ ರಿಂದ ೬೦ ಜನರು ಇದ್ದರು ಎಂದು ಹೇಳಲಾಗುತ್ತಿದೆ. ತಾಂತ್ರಿಕ ತೊಂದರೆಯಿಂದ ಈ ಬಸ್ಸು ಸೇತುವೆ ಸುರಕ್ಷಾ ಬೇಲಿಗೆ ಗುದ್ದಿ ನರ್ಮದಾ ನದಿಗೆ ಉರುಳಿದೆ.

ಅಪಘಾತಕ್ಕೀಡಾದ ಬಸ್ಸು ಬೆಳಗ್ಗೆ ೭.೩೦ ಕ್ಕೆ ಧಾರನಿಂದ ಮಹಾರಾಷ್ಟ್ರದ ಜಳಗಾವ ಜಿಲ್ಲೆಯ ಅಮ್ಮಳನೇರ ಕಡೆಗೆ ಹೊರಟಿತ್ತು. ಅಪಘಾತದ ಮಾಹಿತಿ ಪಡೆಯುವದಕ್ಕಾಗಿ ಎಸ್. ಟಿ ಮಹಾಮಂಡಳವು ೦೨೨.೨೩೦೨೩೯೪೦ ಈ ಹೆಲ್ಪ್ಲೈನ್ ಕ್ರಮಾಂಕ ನೀಡಿದೆ.

ಅಪಘಾತದ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.