* ಖ್ಯಾತ ಪತ್ರಕರ್ತ ಕುಲದೀಪ ನಾಯರ ರಹಸ್ಯ ಸ್ಫೋಟ
ಹೊಸ ದೆಹಲಿ – ಖಾಲಿಸ್ತಾನದ ಬೇಡಿಕೆಯ ನೇತ್ರತ್ವ ವಹಿಸದ್ದ ಭಯೋತ್ಪಾದಕ ಭಿಂದ್ರನವಾಲೆಗೆ ಕಾಂಗ್ರೆಸ ಆರಂಭದಲ್ಲಿ ರಾಜಕೀಯ ಮತ್ತು ಆರ್ಥಿಕ ರಕ್ಷಣೆಯನ್ನು ನೀಡಿತ್ತು. ೧೯೭೫ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ ದೇಶದಾದ್ಯಂತ ಚುನಾವಣೆಯಲ್ಲಿ ಸೋಲನ್ನು ಎದುರಿಸಿತು. ಆ ಸಮಯದಲ್ಲಿ ಪಂಜಾಬನಲ್ಲಿ ಅಕಾಲಿದಳ ಮತ್ತು ಜನತಾ ಪಕ್ಷದ ಸರಕಾರ ಬಂತು. ಅಕಾಲಿದಳದ ಪ್ರಭುತ್ವ ಕಡಿಮೆ ಮಾಡಲು ಭಿಂದ್ರನವಾಲೆಗೆ ಅಂದಿನ ಕಾಂಗ್ರೆಸ ನಾಯಕ ಮತ್ತು ಇಂದಿರಾ ಗಾಂಧಿಯವರ ಮಗ ಸಂಜಯ ಗಾಂದಿ ಮಧ್ಯಸ್ತಿಕೆ ನಡೆಸಿದರು. ಅವರಿಗೆ ಕಾಂಗ್ರೆಸ ರಾಜಕೀಯ ರಕ್ಷಣೆ ಕೊಟ್ಟಿದ್ದಲ್ಲದೇ ಹಣವನ್ನು ಕೂಡಾ ಪೂರೈಸಿತ್ತು ಎಂದು ಖ್ಯಾತ ಪತ್ರಕರ್ತ ಕುಲದೀಪ ನಾಯರ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ರಹಸ್ಯ ಸ್ಫೊಟ ಮಾಡಿದ್ದಾರೆ.
ನಾಯರ ಅವರು ಹಿರಿಯ ಕಾಂಗ್ರೆಸ ನಾಯಕ ಕಮಲನಾಥ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಉಲ್ಲೇಖಿಸಿ ತಮ್ಮ ಆತ್ಮ ಚರಿತ್ರೆಯಲ್ಲಿ ಮೇಲಿನ ಮಾಹಿತಿಯನ್ನು ನೀಡಿದ್ದಾರೆ. ನಂತರ ಭಿಂದ್ರನವಾಲೆ ಮತ್ತು ಖಾಲಿಸ್ತಾನಿಗಳ ವಿರುದ್ಧ ನಡೆದ ಕಾರ್ಯಾಚರಣೆಯಿಂದಾಗಿ ಇಂದಿರಾ ಗಾಂಧಿಯ ಹತ್ಯೆ ಮಾಡಲಾಯಿತು.
ಸಂಪಾದಕೀಯ ನಿಲುವು * ಇದು ಕಾಂಗ್ರೆಸ್ಸಿನ ಮತ್ತೊಂದು ರಾಷ್ಟ್ರವಿರೋಧಿ ಕೃತ್ಯವನ್ನು ಬಯಲು ಮಾಡಿದೆ! ಖಾಲಿಸ್ತಾನಿ ಭಯೋತ್ಪಾದನೆ ಮಾತ್ರವಲ್ಲ ಜಿಹಾದಿ ಭಯೋತ್ಪಾದನೆಯ ಬೆಳವಣಿಗೆಗೂ ಕಾಂಗ್ರೆಸ್ಸಿನ ಮುಸಲ್ಮಾನರ ಓಲೈಕೆಯ ಧೊರಣೆಯೇ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. * ಇಂತಹ ರಾಷ್ಟ್ರವಿರೋಧಿ ಕಾಂಗ್ರೆಸನ್ನು ಕೂಡಲೇ ನಿಷೇಧಿಸಬೇಕು! |