* ಸುದ್ದಿ ಜಾಲತಾಣಗಳು ನೋಂದಣಿ ಅಗತ್ಯ
* ೧೫೫ ವರ್ಷಗಳ ಹಿಂದಿನ ಕಾನೂನನ್ನು ರದ್ದುಗೊಳಿಸಲಾಗುವುದು |
ಹೊಸ ದೆಹಲಿ – ಆನಲೈನ ಮಾಧ್ಯಮಗಳನ್ನು ನಿಯಂತ್ರಿಸಲು ಮತ್ತು ಪತ್ರಿಕೆಗಳಿಗೆ ಸಮಾನವಾದ ಮಾನ್ಯತೆ ನೀಡಲು ಕೇಂದ್ರವು ಹೊಸ ಕಾನೂನನ್ನು ಜಾರಿಗೆ ತರಲು ಸಿದ್ಧವಾಗಿದೆ. ಇದಕ್ಕಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಲಾಗುವುದು. ಈ ಮಸೂದೆ ಅಂಗೀಕರಿಸಲ್ಪಟ್ಟ ನಂತರ ಎಲ್ಲ ಸುದ್ದಿ ಜಾಲತಾಣಗಳು ನೋಂದಾಯಿಸಿಕೊಳ್ಳ ಬೇಕಾಗುವುದು. ಇದುವರೆಗೆ ಈ ನಿಯಮ ಪತ್ರಿಕೆಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ೧೫೫ ವರ್ಷಗಳಷ್ಟು ಹಳೆಯದಾದ ‘ಪ್ರೆಸ್ ಆಂಡ್ ರೆಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್’ ಅನ್ನು ರದ್ದುಗೊಳಿಸಲಾಗುವುದು ಮತ್ತು ಈ ಮಸೂದೆಯನ್ನು ‘ಪ್ರೆಸ್ ಆಂಡ್ ರೆಜಿಸ್ಟ್ರೇಶನ್ ಆಫ್ ಪೀರಿಯೋಡಿಕಲ್ಸ್ ಬಿಲ್’ ಎಂಬ ಹೆಸರಿನಲ್ಲಿ ಮಂಡಿಸಲಾಗುವುದು.
The amendments will bring digital news media under the control of the Information and Broadcasting Ministry.https://t.co/NWjg4O5ecq
— The New Indian Express (@NewIndianXpress) July 15, 2022
ಸಂಪಾದಕೀಯ ನಿಲುವು
ಬ್ರಿಟಿಷರು ಮಾಡಿದ ಕಾನೂನೇ ಇನ್ನೂ ಚಾಲ್ತಿಯಲ್ಲಿದೆ ಎಂದರೆ ಸ್ವಾತಂತ್ರ್ಯದ ನಂತರ ಇದುವರೆಗಿನ ಎಲ್ಲ ಆಡಳಿತಗಾರರಿಗೆ ನಾಚಿಕೆಗೇಡು! |