|
ಚಾಮರಾಜನಗರ – ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಕರಿ ಈದ್ ದಿನದಂದು ಶಾಲೆಯ ಮುಸಲ್ಮಾನನೇತರ ವಿದ್ಯಾರ್ಥಿಗಳನ್ನು ದರ್ಗಾ ಮತ್ತು ಮಸೀದಿಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ ಶಾಲೆಯ ಆಡಳಿತದ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಈ ವಿಷಯವಾಗಿ ‘ಹಿಂದೂ ಜಾಗರಣ ವೇದಿಕೆ’ ಈ ಸಂಘಟನೆಯಿಂದ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ.
ಗುಂಡ್ಲುಪೇಟೆ| ದರ್ಗಾಕ್ಕೆ ಎಲ್‌ಕೆಜಿ ಮಕ್ಕಳ ಭೇಟಿ: ಹಿಂದೂ ಜಾಗರಣೆ ವೇದಿಕೆ ಆಕ್ಷೇಪ#Darga #Chamarajanagara #Studentshttps://t.co/F244nwn9Mo
— Prajavani (@prajavani) July 12, 2022
‘ಯಂಗ್ ಸ್ಕಾಲರ್’ ಎಂಬ ಶಾಲೆಯಿಂದ ಎಲ್‌ಕೆಜಿ ವಿದ್ಯಾರ್ಥಿಗಳನ್ನು ದರ್ಗಾ ಮತ್ತು ಮಸೀದಿಗೆ ಕರೆದುಕೊಂಡು ಹೋಗಲಾಯಿತು. ಸ್ಥಳೀಯ ಜನರ, ಒಂದು ಧಾರ್ಮಿಕ ನಾಯಕರಿಂದ ಈ ಮಕ್ಕಳಿಗೆ ಮಸೀದಿಯಲ್ಲಿ ನಮಾಜ್ ಮಾಡಿಸಿ ಮತ್ತು ದರ್ಗಾದಲ್ಲಿ ‘ಉಪದೇಶ’ ಕೇಳಲು ಅನಿವಾರ್ಯ ಪಡಿಸಲಾಯಿತು ಎಂದು ಆರೋಪಿಸಿದ್ದಾರೆ. ಈ ವಿಷಯವಾಗಿ ಶಾಲೆಯ ಆಡಳಿತ ಕ್ಷಮೆ ಕೇಳುತ್ತ ಸಂಬಂಧಿತ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಪೋಷಕರಿಗೆ ಈ ಈ ವಿಷಯವಾಗಿ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಈ ರೀತಿ ಒಂದೇ ಕಡೆಯಿಂದ ಸರ್ವ ಧರ್ಮ ಸಮಭಾವ ಹಿಂದುಗಳ ಆತ್ಮಘಾತ ಮಾಡುತ್ತಿದೆ, ಇದು ಹಿಂದುಗಳಿಗೆ ಯಾವಾಗ ತಿಳಿಯುವುದು ? ಹಿಂದೂಗಳಿಗೆ ಇದರ ಅರಿವಾಗುವುದಕ್ಕಾಗಿ ಹಿಂದೂ ಸಂಘಟನೆಗಳು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡಲು ಪ್ರಾರಂಭಿಸುವುದು ಅವಶ್ಯಕವಾಗಿದೆ ! |