ಭಾಗ್ಯನಗರದಲ್ಲಿ ಕ್ರಮ!
ಭಾಗ್ಯನಗರ (ತೆಲಂಗಾಣಾ) – ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ಖಾದಿಮ್ (ಸೇವಕ) ಗೌಹರ್ ಚಿಶ್ತಿಯನ್ನು ಭಾಗ್ಯನಗರದಿಂದ ಬಂಧಿಸಲಾಗಿದೆ. ಭಾಜಪದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ನೀಡಿದ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಚಿಶ್ತಿಯು ಶರ್ಮಾ ಅವರ ಶಿರಚ್ಛೇದ ಮಾಡುವಂತೆ ಮುಸ್ಲಿಮರನ್ನು ಪ್ರಚೋದಿಸಿದ್ದ. ಅದೇ ರೀತಿ ಉದಯಪುರದಲ್ಲಿ ಕನ್ಹೈಯ್ಯಾಲಾಲ್‌ನನ್ನು ಕೊಂದವರಿಗೂ ಆತನಿಗೂ ಸಂಬಂಧವಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಚಿಶ್ತಿಯನ್ನು ಅಜ್ಮೀರ್‌ಗೆ ಕರೆದೊಯ್ಯಲಾಗುವುದು.
ಚಿಶ್ತಿ ಪ್ರಚೋದನೆ ನೀಡಿದ ಪ್ರಕರಣ ಬೆಳಕಿಗೆ ಬಂದಾಗ, ಚಿಶ್ತಿ ತನ್ನ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದ. ಜೂನ್ ೧೭ ರಂದು ಚಿಸ್ತಿ ಉದಯಪುರಕ್ಕೆ ಹೋಗಿದ್ದನು. ಅಲ್ಲಿ ಆತ ‘ಸರ್ ತಾನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಿದ್ದ. ಆ ಸಮಯದಲ್ಲಿ ಅವನು ಕನ್ಹೈಯಾಲಾಲನ ಹಂತಕರಲ್ಲಿ ಒಬ್ಬನಾದ ಮುಹಮ್ಮದ್ ರಿಯಾಜ್‌ನನ್ನು ಭೇಟಿಯಾಗಿದ್ದ. ಅದೇ ದಿನ ರಿಯಾಜ್ ಶಿರಚ್ಛೇದದ ಬಗ್ಗೆ ವೀಡಿಯೋ ಮಾಡಿ ಹೇಳಿಕೆ ನೀಡಿದ್ದನು.
ಗೌಹರ್ ಚಿಶ್ತಿ ಹೇಳಿದ್ದೇನು ?ಗೌಹರ್ ಚಿಶ್ತಿಯ ವೀಡಿಯೋವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ಅದರಲ್ಲಿ ಆತ, ‘ಪ್ರವಾದಿ ವಿರುದ್ಧದ ಹೇಳಿಕೆಯನ್ನು ಎಂದಿಗೂ ಸಹಿಸುವುದಿಲ್ಲ. ‘ಗುಸ್ತಖ್ ಇ ರಸೂಲ್ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ, ಸರ್ ತಾನ್ ಸೆ ಜುದಾ.’(ಪ್ರವಾದಿಯ ಅವಮಾನ ಮಾಡುವವರ ಶಿರಚ್ಛೇದ ಏಕೈಕ ಶಿಕ್ಷೆಯಾಗಿದೆ!) ಪ್ರವಾದಿಗೆ ಗೌರವ ಸಿಗಬೇಕು, ಅದಕ್ಕಾಗಿ ನಾವು ಶಿರಚ್ಛೇದವನ್ನೂ ಮಾಡಲು ಸಿದ್ಧರಿದ್ದೇವೆ. ನೂಪುರ್ ಶರ್ಮಾ ತಪ್ಪು ಮಾಡಿದ್ದಾಳೆ, ಆಕೆಗೆ ಬದುಕುವ ಹಕ್ಕಿಲ್ಲ !’ ಎಂದು ಹೇಳಿದ್ದರಿಂದ ಅಜ್ಮೀರ್ ಪೊಲೀಸರು ಗೌಹರ್ ಚಿಶ್ತಿ ವಿರುದ್ಧ ಜೂನ್ ೨೫ ರಂದು ಪ್ರಕರಣ ದಾಖಲಿಸಿದ್ದರು. |