ಇಂದಿನಿಂದ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್! – ಕೇಂದ್ರ ಸರಕಾರದ ಘೋಷಣೆ

ಹೊಸ ದೆಹಲಿ – ಕೇಂದ್ರ ಸರಕಾರವು ೧೮ ರಿಂದ ೫೯ ವರ್ಷದ ವಯಸ್ಸಿನ ಎಲ್ಲಾ ನಾಗರಿಕರಿಗೆ ಜುಲೈ ೧೫ ರಿಂದ ಕೊರೋನಾ ಪ್ರತಿರೋಧಕ ಲಸಿಕೆಯ ಬೂಸ್ಟರ್ ಡೋಸ್ ಯಾವುದೇ ಶುಲ್ಕ ಇಲ್ಲದೆ ನೀಡುವುದಾಗಿ ಘೋಷಿಸಿದೆ. ಜುಲೈ ೧೫ ರಿಂದ ೭೫ ದಿನಗಳ ಕಾಲ ಇದನ್ನು ನೀಡಲಾಗುವುದು. ಕೇಂದ್ರದ ಮಾಹಿತಿ ಮತ್ತು ಪ್ರಸಾರಣ ಸಚಿವ ಅನುರಾಗ ಠಾಕೂರ್ ಇವರು ಪತ್ರಕರ್ತರ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಇಲ್ಲಿಯವರೆಗೆ ೯೬% ಅರ್ಹ ನಾಗರಿಕರಿಗೆ ಮೊದಲ ಹಾಗೂ ೮೭% ನಾಗರಿಕರಿಗೆ ಎರಡನೆಯ ಡೋಸ್ ನೀಡಲಾಗಿದೆ. ಇಲ್ಲಿಯವರೆಗೆ ೧೮ ರಿಂದ ೫೯ ವರ್ಷದ ವಯೊಮಾನದ ೭೭ ಕೋಟಿ ಜನಸಂಖ್ಯೆಯಲ್ಲಿ ೧% ಕಿಂತಲೂ ಕಡಿಮೆ ನಾಗರಿಕರು ಬೂಸ್ಟರ್ ಡೋಸ್ ತೆಗೆದುಕೊಂಡಿರುವ ಬಗ್ಗೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗುಂಪಿನ ೧೬ ಕೋಟಿ ನಾಗರಿಕರಲ್ಲಿ ಸರಾಸರಿ ೨೬% ನಾಗರಿಕರು ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ.