ಹೊಸ ಸಂಸತ್ತು ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖದಲ್ಲಿ ಬದಲಾವಣೆ – ವಿರೋಧಿ ಪಕ್ಷಗಳ ಆರೋಪ

ಹೊಸ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಇವರು ಜುಲೈ ೧೧ ರಂದು ಹೊಸ ಸಂಸತ್ ಭವನನ ಛಾವಣಿಯ ಮೇಲೆ ಇರುವ ಕಂಚಿನ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು. ಆದರೆ ಇದೀಗ ಅದರ ಮೇಲಿರುವ ಸಿಂಹಗಳ ರಚನೆಯಲ್ಲಿ ಬದಲಾವಣೆ ಮಾಡಲಾಗಿರುವ ಆರೋಪ ಕೇಳಿಬರುತ್ತಿದೆ. ವಿರೋಧಿ ಪಕ್ಷಗಳ ಪ್ರಕಾರ ಅನಾವರಣಗೊಂಡ ರಾಷ್ಟ್ರೀಯ ಲಾಂಛನದ ಸಿಂಹಗಳು ಕ್ರೂರ ಮತ್ತು ಆಕ್ರಾಮಕ ಕಾಣಿಸುವಂತೆ ತಯಾರಿಸಲಾಗಿದ್ದು, ಅದಕ್ಕಾಗಿ ಸಿಂಹದ ಮುಖ ತೆರೆದಿರುವ ಹಾಗೆ ತೋರಿಸಲಾಗಿದೆ. ಸಾರನಾಥ ಸಂಗ್ರಹಾಲಯದಲ್ಲಿ ಇಟ್ಟಿರುವ ಮೂಲ ಅಶೋಕ ಸ್ತಂಭದ ಸಿಂಹಗಳ ಮುಖ ತೆರೆದಿಲ್ಲ.

ಅಶೋಕ ಸ್ತಂಭ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸುನಿಲ ದೇವರೇ ಇವರ ಪ್ರಕಾರ ‘ನಾವು ಯಾರ ಸೂಚನೆಯ ಮೇಲೆಯೂ ಯಾವುದೇ ಬದಲಾವಣೆ ಮಾಡಿಲ್ಲ. ಸಾರನಾಥ ಸ್ತಂಭದ ಹಾಗೆಯೇ ಇದನ್ನು ತಯಾರಿಸಲಾಗಿದೆ. ಕೇವಲ ಆಕಾರ ಮತ್ತು ವಿಶಿಷ್ಟ ಕೋನದಿಂದ ತೆಗೆದಿರುವ ಛಾಯಾಚಿತ್ರದಿಂದ ಮೂಲ ಶಿಲ್ಪ ಮತ್ತು ಕಂಚಿನ ಪ್ರತಿಕೃತಿ ಇದರಲ್ಲಿ ವ್ಯತ್ಯಾಸವಿದ್ದಂತೆ ಕಾಣಿಸುತ್ತದೆ. ಅದರಲ್ಲಿ ಬೇರೆ ಯಾವುದೇ ಕಾರಣವಿಲ್ಲ. ಏನಾದರೂ ನೀವು ಸಾರನಾಥದ ಮೂಲ ಶಿಲ್ಪ ನೋಡಿದರೆ, ಅದು ಇದ್ದ ಹಾಗೆ ಹೊಸ ಸಂಸತ್ತಿನ ಪ್ರತಿಕೃತಿ ಹಾಗೆ ಕಾಣುತ್ತದೆ.