ಒಂದು ವಿಶೇಷ ಸಮುದಾಯದ ಜನಸಂಖ್ಯೆ ಹೆಚ್ಚಾದಾಗ ಅರಾಜಕತೆ ನಿರ್ಮಾಣವಾಗುವ ಅಪಾಯ ಇರುತ್ತದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಲಕ್ಷ್ಮಣ ಪುರಿ (ಉತ್ತರ ಪ್ರದೇಶ) – ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗಿ ಮುಂದೆ ನಡೆಸಬೇಕು, ಇದರಿಂದ ಭವಿಷ್ಯದಲ್ಲಿ ಜನಸಂಖ್ಯೆಯ ಕಾರಣದಿಂದ ಅಸಮತೋಲನ ನಿರ್ಮಾಣ ಆಗಬಾರದು, ಹಾಗೆ ಆಗಬಾರದೆಂದರೆ, ಮೂಲ ನಿವಾಸಿಗಳ ಜನಸಂಖ್ಯೆ ಕಡಿಮೆಯಾಗಿ ಒಂದು ವಿಶೇಷ ಸಮುದಾಯದ ಜನಸಂಖ್ಯೆ ಹೆಚ್ಚುತ್ತಾ ಹೋಗುವುದು. ಇದರಿಂದ ಅರಾಜಕತೆ ನಿರ್ಮಾಣವಾಗುವ ಅಪಾಯ ಇರುತ್ತದೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದರು. ಅವರು ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತು ಮುಂದುವರಿಸಿ, ಒಂದು ಸಮುದಾಯದ ಜನಸಂಖ್ಯೆ ಹೆಚ್ಚುವ ವೇಗ ಹೆಚ್ಚಿದ್ದರೆ ಮತ್ತು ಮೂಲ ನಿವಾಸಿಯ ಜನಸಂಖ್ಯೆ ಕಡಿಮೆಯಾಗುತ್ತದೆ ಹೀಗೆ ಆಗಬಾರದು. ಜನಸಂಖ್ಯಾ ಅಸಮತೋಲನ ದೇಶಕ್ಕಾಗಿ ಚಿಂತೆಯ ವಿಷಯವಾಗಿದೆ. ಎಲ್ಲಿ ಧಾರ್ಮಿಕ ಜನಸಂಖ್ಯೆಯ ಮೇಲೆ ಪರಿಣಾಮ ಆಗುತ್ತದೆ, ಅಲ್ಲಿ ಒಂದು ಕಾಲಾವಧಿಯ ನಂತರ ಅರಾಜಕತೆ ಮತ್ತು ಅವ್ಯವಸ್ಥೆ ನಿರ್ಮಾಣವಾಗುತ್ತದೆ. ಇಂಥಹ ಸಮಯದಲ್ಲಿ ಯಾವಾಗ ನಾವು ಜನಸಂಖ್ಯೆಯ ಮೇಲೆ ನಿಯಂತ್ರಣ ತರುವುದಕ್ಕಾಗಿ ಹೇಳುತ್ತೇವೆ ಆಗ ಸಮಾಜದ ಪ್ರತಿಯೊಂದು ಜಾತಿ, ಧರ್ಮ, ಕ್ಷೇತ್ರ ಮತ್ತು ಭಾಷೆ ಇದರಿಂದ ಆಚೆ ಹೋಗಿ ಆ ವಿಷಯವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹೇಳುತ್ತೇವೆ ಎಂದು ಹೇಳಿದರು.

(ಸೌಜನ್ಯ : HW News Network)

ಸಂಪಾದಕೀಯ ನಿಲುವು

ಜನಸಂಖ್ಯಾ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಶೀಘ್ರವಾಗಿ ಕಾನೂನು ಜಾರಿ ಮಾಡಬೇಕು ಹಾಗೂ ಸಮಾನ ನಾಗರೀಕ ಕಾನೂನು ಕೂಡ ಅನುಮೋದಿಸಬೇಕು ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಹಿಂದುಗಳಿಗೆ ಅನಿಸುತ್ತದೆ !