ನ್ಯಾಯಾಲಯ ನಿಂದನೆ ಆರೋಪದ ಪ್ರಕರಣದಲ್ಲಿ ವಿಜಯ ಮಲ್ಯಗೆ ೪ ತಿಂಗಳ ಜೈಲು ಶಿಕ್ಷೆ

ಹೊಸ ದೆಹಲಿ – ಭಾರತದಲ್ಲಿಯ ಬ್ಯಾಂಕುಗಳ ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ಮಾಡಿದ ಅರೋಪದಲ್ಲಿ ನಾಲ್ಕು ತಿಂಗಳ ಜೈಲು ಹಾಗೂ ೨ ಸಾವಿರ ರೂಪಾಯಿಗಳ ದಂಡದ ವಿಧಿಸಿದೆ. ಮಲ್ಯಾನು ಕುಟುಂಬಕ್ಕೆ ಕಳುಹಿಸಿದ್ದ ೪೦ ದಶಲಕ್ಷ ಡಾಲರ‍್ಸ್ (೩೧ ಕೋಟಿ ೭೫ ಲಕ್ಷ ೪೨ ಸಾವಿರ ರೂಪಾಯಿ) ಹಣವನ್ನು ಹಿಂದಿರುಗಿಸುವಂತೆಯೂ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.