ವಂಚಕ ಸುಕೇಶ ಚಂದ್ರಶೇಖರ ಅವರಿಂದ ಲಂಚ ಪಡೆದ ಜೈಲಿನ ೮೨ ಸಿಬ್ಬಂದಿಗಳ ವಿರುದ್ಧ ಅಪರಾಧ ದಾಖಲು

ದೆಹಲಿಯ ರೋಹಿಣಿ ಜೈಲಿನ ಸಿಬ್ಬಂದಿಗಳಿಗೆ ತಿಂಗಳಿಗೆ ೧.೫ ಕೋಟಿ ರೂಪಾಯಿ ಲಂಚ ಸಿಗುತ್ತಿತ್ತು !

ಹೊಸ ದೆಹಲಿ – ವಂಚಕ ಸುಕೇಶ ಚಂದ್ರಶೇಖರನಿಂದ ತಿಂಗಳಿಗೆ ೧.೫ ಕೋಟಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇಲ್ಲಿನ ರೋಹಿಣಿ ಜೈಲಿನ ೮೨ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಇಲ್ಲಿಯ ೮ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಲಂಚಕ್ಕೆ ಪ್ರತಿಯಾಗಿ ಸುಕೇಶಗೆ ಜೈಲಿನಲ್ಲಿ ಸಂಚಾರವಾಣಿ ಉಪಯೋಗಿವುದು ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತಿತ್ತು. ೨೦೦ ಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶನನ್ನು ಬಂಧಿಸಲಾಗಿತ್ತು. ಈ ಹಿಂದೆ ತಿಹಾರ ಜೈಲಿನಲ್ಲಿದ್ದಾಗ ಆತ ಜೈಲಿನ ಆಡಳಿತದ ಭದ್ರತೆ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಇದು ರಾಜಧಾನಿ ದೆಹಲಿಯ ಜೈಲು ಒಂದರಲ್ಲಿನ ಪರಿಸ್ಥಿತಿಯಾದರೆ ದೇಶದ ಇತರ ಜೈಲುಗಳಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !