ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದ ಆರೋಪಿ ೨೬ ವರ್ಷಗಳ ನಂತರ ನಿರ್ದೋಷಿ ಎಂದು ಬಿಡುಗಡೆ!

ಮುಜಫ್ಫರನಗರ (ಉತ್ತರಪ್ರದೇಶ ) : ಇಲ್ಲಿ ನವೆಂಬರ್ ೨, ೧೯೯೬ರಂದು ಕಾನೂನು ಬಾಹಿರ ಪಿಸ್ತೂಲು ಇಟ್ಟುಕೊಂಡಿರುವ ಪ್ರಕರಣದಲ್ಲಿ ಬಂಧಿಸಲಾದ ಒಬ್ಬ ವ್ಯಕ್ತಿಗೆ ೨೬ ವರ್ಷಗಳ ನಂತರ ಸಾಕ್ಷಿಯ ಕೊರತೆ ಇಂದ ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಬಂಧಿತನಾಗಿ ೩ ತಿಂಗಳ ನಂತರ ರಾಮರತನಗೆ ಜಾಮೀನು ದೊರೆತಿತ್ತು. ಅವರ ವಯಸ್ಸು ಈಗ ೭೦ ವರ್ಷ. ಈ ಪ್ರಕರಣದಿಂದ ರಾಮರತನ ಅವರ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ೨ ಹೆಣ್ಣುಮಕ್ಕಳ ಶಿಕ್ಷಣ ಆಗಲಿಲ್ಲ .ಈ ವಿಷಯದಲ್ಲಿ ರಾಮಾರತನ ಇವರು ಸರಕಾರಕ್ಕೆ ಆರ್ಥಿಕ ಸಹಾಯದ ಜೊತೆಗೆ ಸುಳ್ಳು ಆರೋಪ ಹೊರಸಿರುವವನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.(ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ? ಸರಕಾರ ತಾನಾಗಿಯೇ ಇದನ್ನು ಗಮನಿಸಿ ಸಂಬಂಧಿತರ ಮೇಲೆ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿ ಸರಕಾರ ಕಾನೂನು ರಚನೆ ಮಾಡಿ ಆರ್ಥಿಕ ಪರಿಹಾರ ನೀಡುವ ಉಪಾಯ ಮಾಡಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ನಿರಪರಾಧಿಗಳನ್ನು ಬಂಧಿಸಿ ಅವರ ಜೀವನ ಹಾಳು ಮಾಡಿರುವವರಿಗೆ ಶಿಕ್ಷೆ ವಿಧಿಸಬೇಕು !